ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕಾಂಗ್ರೆಸ್ ದಿಟ್ಟತನ ಆರ್ಟಿಐ ಅನುಷ್ಠಾನ'

Rashmi Kasaragodu
Updated On : 5 Apr 2014, 1:47 am

ಹಾಸನ: ಭ್ರಷ್ಟಾಚಾರ ತಡೆಯಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆಯಿಂದಲೇ (ಆರ್ಟಿಐ) ಕಾಂಗ್ರೆಸ್ನಲ್ಲಿ ಕೆಲವರು ನಡೆಸಿದ ಭ್ರಷ್ಟಾಚಾರ ಪ್ರಕರಣಗಳು ಬಯಲಾದವು. ಇದರ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವಿನಿ ಕುಮಾರ್ ರೈ ತಿಳಿಸಿದರು.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಪಕ್ಷದ ನಾಯಕರೇ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಕಂಡ ಕಾಂಗ್ರೆಸ್ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ. ಹಾಗಾಗಿಯೇ, ಕಾಮನ್ವೆಲ್ತ್ ಹಗರಣದ ಆರೋಪಿ ಸುರೇಶ್ ಕಲ್ಮಾಡಿ ಹಾಗೂ ಇನ್ನಿತರ ಹಗರಣಗಳ ಆರೋಪಿಗಳಿಗೆ ಟಿಕೆಟ್ ನೀಡಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವಿನಿಕುಮಾರ್ ರೈ ವಿವರಿಸಿದರು.  ಇದೇ ವೇಳೆ, ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರಗಳ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಆತ್ಮವಿಶ್ವಾದಿಂದ ಮತದಾರರ ಬಳಿ ಮತ ಕೇಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರತಿಪಾದನೆ: ಕಳೆದ ಹತ್ತು ವರ್ಷಗಳಿಂದ ಕೇಂದ್ರದ ಯುಪಿಎ ಸರ್ಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಜನಪ್ರಿಯ ಯೋಜನೆಯಗಳೇ ಈ ಬಾರಿ ಲೋಕಸಭಾ ಚುನಾವಣೆಗೆ ಬುನಾದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಯಿಂದಾಗಿ ಆತ್ಮಾಭಿಮಾನದಿಂದ ಮತದಾರರ ಬಳಿ ಹೋಗಲಾಗುತ್ತಿದೆ. ಯುಪಿಎ ಸರ್ಕಾರದ ಮೊದಲ ಅವಧಿಯ ಆಡಳಿತಾವಧಿಯಲ್ಲಿ ಆರ್ಟಿಐ ಜಾರಿಗೆ ತರುವ ಮೂಲಕ ಭ್ರಷ್ಟಾಚಾರ ತಡೆಯಲು ಸಹಕಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಹಲವು ಯೋಜನೆಗಳು: ರೈತರ ಸಾಲ ಮನ್ನಾ, ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ ಉದ್ಯೋಗದಂತಹ ಕಾರ್ಯಕ್ರಮ, ಮುಂಬೈನಲ್ಲಿ ಹಾಗೂ ಇತರೆಡೆ ನಡೆದ ವಿಧ್ವಂಸಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಹೆಚ್ಚಿನ ಹಾನಿ ತಡೆಯಲು ಸಾಧ್ಯವಾಗಿದೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಲೋಕಪಾಲ ಮಸೂದೆ, ಭೂಸ್ವಾದೀನ ಕಾಯ್ದೆ ಜಾರಿ ಮೂಲಕ ಭೂಮಿ ಕೊಟ್ಟವರಿಗೆ ಸೂಕ್ತ ಪರಿಹಾರ ಮತ್ತು ಪ್ರತ್ಯೇಕ ಜಾಗದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಆರ್ಥಿಕ ಸ್ಥಿತಿ ಉತ್ತಮ: ದೇಶದ ಅಭಿವೃದ್ಧಿಯು ಎರಡಂಕಿ ದಾಟುವುದಾಗಿ ಹೇಳಲಾಗಿತ್ತು. ರೂಪಾಯಿ ಮೌಲ್ಯದ ಕುಸಿತದಿಂದಾಗಿ ಅದನ್ನು ಸಾಧಿಸಲಾಗಲಿಲ್ಲ. ಪ್ರಸ್ತುತ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ನೀಡಿರುವ ಜನಪರ ಯೋಜನೆಗಳಿಂದಾಗಿ ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದರು.
ಮತ ನೀಡಿ: ಹಾಸನ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜುಗೆ ಹೆಚ್ಚಿನ ಮತ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಕೊನೆ ಹಾಕಬೇಕು. ಈ ಬಾರಿ ಜಿಲ್ಲೆಯ ಜನ ಬದಲಾವಣೆಯನ್ನು ಬಯಸಿರುವ ಹಿನ್ನೆಲೆಯಲ್ಲಿ, ಮಂಜು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.  ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಮುಖಂಡರಾದ ಬಸವರಾಜು, ಪರ್ವೀಜ್, ಇಕ್ಬಾಲ್, ಮಹಮದ್ ಅಶ್ರಫ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement