ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಳ್ಳೇಹಣ್ಣು ತಿನ್ನಿಸಿ ಚಾಲಕರು ಪರಾರಿ!

Rashmi Kasaragodu
Updated On : 5 Apr 2014, 1:54 am

ಸಕಲೇಶಪುರ: ಅಕ್ರಮ ಮರಳುಗಾರರು ತಾಲೂಕು ಆಡಳಿತಕ್ಕೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಗುರುವಾರ ಪಟ್ಟಣದ ಮಿನಿವಿಧಾನ ಸೌಧದ ಎದುರು ನಡೆದಿದೆ. ಮರಳುಗಾರಿಕೆ ನಡೆಸಲು ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ಅಧಿಕ ಭಾರ, ಅವಧಿ ಮೀರಿ ಸಾಗಣೆ ಮಾಡುತ್ತಿದ್ದ 16 ಲಾರಿಗಳನ್ನು ತಾಲೂಕು ಆಡಳಿತಾಧಿಕಾರಿಗಳು ಪಟ್ಟಣದ ಬಿ.ಎಂ. ರಸ್ತೆಯಲ್ಲಿ ವಶಕ್ಕೆ ಪಡೆದಿದ್ದರು.
ಆದರೆ, ವಶಕ್ಕೆ ಪಡೆದ ಲಾರಿಗಳನ್ನು ಮಿನಿವಿಧಾನ ಸೌಧದ ಎದುರು ನಿಲ್ಲಿಸಿ ದಾಖಲೆಗಳನ್ನು ವಶಕ್ಕೆ ಪಡೆದ ನಂತರ ವಿಶ್ರಾಂತಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ, ಎಲ್ಲಾ ಲಾರಿಗಳ ಸಮೇತ ಚಾಲಕರು ಪರಾರಿಯಾಗಿದ್ದಾರೆ.
ಅಧಿಕಾರಿಗಳು ಕಕ್ಕಾಬಿಕ್ಕಿ: ವಿಶ್ರಾಂತಿ ಮುಗಿಸಿ ಬಂದ ನೋಡಿದ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಈ ರೀತಿಯ ಘಟನೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೂರು ಬಾರಿಯಾಗಿದ್ದರೂ ಈ ಲಾರಿಗಳನ್ನು ಮತ್ತೆ ವಶಪಡಿಸಿಕೊಳ್ಳಲು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement