ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಯಣ್ಣ ಮನೆಗೆ ಸಿಎಂ: ಭುಗಿಲೆದ್ದ ವಿವಾದ

Rashmi Kasaragodu
Updated On : 5 Apr 2014, 1:46 am

ಅರಸೀಕೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಉದ್ಯಮಿ ಜೆ.ಪಿ. ಜಯಣ್ಣ  ನಿವಾಸಕ್ಕೆ ನೀಡುವ ಮೂಲಕ ಮಾಜಿ ಸಚಿವ ಬಿ. ಶಿವರಾಂ ಬೆಂಬಲಿಗರನ್ನು ಅವಮಾನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಭ್ಯರ್ಥಿ ಎ. ಮಂಜು ಅವರನ್ನು ಪ್ರಶ್ನೆ ಮಾಡಿದ ಘಟನೆ ನಡೆಯಿತು.
ಪಟ್ಟಣದ ಹೊರವಲಯದಲ್ಲಿ ಇರುವ ಖಾಸಗಿ ಹೊಟೇಲ್ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜಯಣ್ಣ ಮನೆಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರಿಂದ ಅಸಮಾಧಾನಗೊಂಡಿರುವ ಕಾರ್ಯರ್ತರು ಅಭ್ಯರ್ಥಿ ಎ. ಮಂಜು ಸಮ್ಮುಖದಲ್ಲಿ ವಿಷಯ ಪ್ರಸ್ತಾಪಿಸಿ,ದ ಮುಖಂಡರು ತಾವೂ ಕೂಡ ಕಾಂಗ್ರೇಸ್ ಕಾರ್ಯಕರ್ತರಾಗಿ ಪಕ್ಷದ ಹಿತಕ್ಕಾಗಿ ದುಡಿದಿದ್ದೇವೆ. ಸಿಎಂ ಹೀಗೆ ಮಾಡಿ ಅವಮಾನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಬಿ. ಶಿವರಾಂ ಮತ್ತವರ ಬೆಂಬಲಿಗರು ಪಕ್ಷಕ್ಕೆ ಆಗಮಿಸಿರುವ ಮುಖಂಡರನ್ನು ನಿರಂತರವಾಗಿ ಅಪಮಾನಗೊಳಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದು ಪಕ್ಷಕ್ಕಾಗಿ ದುಡಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಎ. ಮಂಜು ಮಾತನಾಡಿ, ಪಕ್ಷಕ್ಕಿಂತ ಯಾರು ದೊಡ್ಡವರಿಲ್ಲ. ತಮ್ಮ ರಕ್ಷಣೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ತಾವು ಪಕ್ಷದ ಪರ ಪ್ರಚಾರಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.
ಗೌಡರ ವಿರುದ್ಧ ವಾಗ್ದಾಳಿ: ನಂತರ ಮಾತನಾಡಿದ ಮಂಜು, ದೇವೇಗೌಡರು ಮತ್ತು ಅವರ ಮಕ್ಕಳ ಹಾವಳಿಯ ನಡುವೆಯೂ ಮೂರನೇಯ ಬಾರಿಗೆ ಕ್ಷೇತ್ರದ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಿಂತ ಕುಟುಂಬದ ಅಭಿವೃದ್ಧಿಗಾಗಿಯೇ ದುಡಿದಿರುವುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತವರ ಮಕ್ಕಳ ಸಾಧನೆ, ಹಾಸನದಲ್ಲಿ ತಮ್ಮ ಕುಟುಂಬ ಟ್ರಸ್ಟ್ ಹೆಸರಿನಲ್ಲಿ ಬಹುಮಹಡಿ ಕಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದೆಯೇ ಹೊರತು ಜಿಲ್ಲೆಯ ಅಭಿವೃದ್ಧಿಗಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನು ಮರೆಮಾಚಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ನವರು, ಅರಕಲಗೂಡು ರಸ್ತೆಗಳ ಗುಂಡಿ ಮುಚ್ಚಲಾಗದ ವ್ಯಕ್ತಿಯಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವೇ ಎಂದು ಟೀಕಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಲೇವಡಿ ಮಾಡಿದರು.
10ಕ್ಕೆ ಸಿಎಂ ಆಗಮನ: ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವ ಉದ್ದೇಶದಿಂದ ಏ10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸೀಕೆರೆ ಪಟ್ಟಣಕ್ಕೆ ಆಗಮಿಸುತ್ತಿದ್ದು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಬ್ಬಳ್ಳಿ ರಂಗೇಗೌಡ, ಶೇಷೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಗೀಜಿಹಳ್ಳಿ ಗುರುಸಿದ್ದಪ್ಪ, ಉದ್ಯಮಿ ಜೆ.ಪಿ. ಜಯಣ್ಣ, ರಂಗಾಪುರ ಶಿವಶಂಕರ್, ಹುಲ್ಲೇಕೆರೆ ಕುಮಾರ್, ಹಾರನಹಳ್ಳಿ ನಂದೀಶ್, ಡಾಬಾ ವಾಸು, ದಯಾನಂದ್. ರೋಷನ್ ಲಾಲ್ ಚೋಪ್ರಾ ಹಾಗೂ ಇತರರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement