ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಜೆಪಿ ಗೆಲವು ಶತಸಿದ್ಧ: ಹೇಮಂತ್

Rashmi Kasaragodu
Updated On : 5 Apr 2014, 1:46 am

ಸಕಲೇಶಪುರ: ಹಾಸನ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಗೆಲವು ಶತಸಿದ್ಧ ಎಂದು ಯುವ ಮೋರ್ಚಾ ತಾಲೂಕು ಅಧ್ಯಕ್ಷ ಹೆರೂರು ಹೇಮಂತ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ನಿರ್ದೇಶನದಂತೆ ಯುವ ಮೋರ್ಚಾ ಮನೆ ಮನೆ ಪ್ರಚಾರದಲ್ಲಿ ತೊಡಗಿದೆ. ಈಗಾಗಲೇ ಹೆತ್ತೂರು ಹಾಗೂ ಯಸಳೂರು ಹೋಬಳಿಯಲ್ಲಿ ಮನೆಮನೆ ಪ್ರಚಾರ ಚಾಲನೆಯಲ್ಲಿದ್ದು  ಹೋದೆಡೆಯೆಲ್ಲ ಉತ್ತಮ ಬೆಂಬಲ ದೊರೆಯುತ್ತಿದೆ ಎಂದರು.
ಜಿಲ್ಲೆಯನ್ನು ಹಲವು ಬಾರಿ  ಪ್ರತಿನಿಧಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಮಲೆನಾಡ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ ಆದ್ದರಿಂದ ಈ ಬಾರಿ ಮೋದಿ ಅಲೆಯ ಪ್ರಭಾವ ಹಾಗೂ ಕಾರ್ಯಕರ್ತರ ಒಟ್ಟು ಶ್ರಮದ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದರು. ಪಕ್ಷದ ಮುಖಂಡರಾದ ಪ್ರಶಾಂತ ಶೆಟ್ಟಿ, ಶಿವಕುಮಾರ್, ಮೇಘರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement