ವಿಜಯ್ ಶಂಕರ್ ಸಮರ್ಥ ಅಭ್ಯರ್ಥಿ
ಹಾಸನ: ತಮ್ಮ ಪಕ್ಷ ಬಿಜೆಪಿಯ ಅಭ್ಯರ್ಥಿ ಸಮರ್ಥ ಸಜ್ಜನಿಕೆ, ಕಳಂಕ ರಹಿತರಾದ ವಿಜಯ್ ಶಂಕರ್ ಪ್ರತಿಸ್ಪರ್ಧಿಯಾಗಿದ್ದಾರೆ ಎಂದು ಎಂಎಲ್ಸಿ ಪುಟ್ಟಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ್ ಶಂಕರ್ ಅವರನ್ನು ಈ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿರುವುದು ಅನಿರೀಕ್ಷಿತ ಬೆಳವಣಿಗೆಯಲ್ಲ ಎಂದ ಅವರು, ಎಲ್ಲಾ ರೀತಿ ಲೆಕ್ಕಾಚಾರ ಮಾಡಿಯೇ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದರು.
ಹಾಸನ ಜಿಲ್ಲೆಯಲ್ಲಿ, 3.5 ಲಕ್ಷಕ್ಕೂ ಹೆಚ್ಚು ಹಿಂದುಳಿದವರು, 6 ಲಕ್ಷಕ್ಕೂ ಹೆಚ್ಚು ಒಕ್ಕಲಿಗರು, 2 ಲಕ್ಷಕ್ಕೂ ಹೆಚ್ಚು ಲಿಂಗಾಯರು ಹಾಗೂ ಲಕ್ಷಾಂತರ ಮಂದಿ ದಲಿತರು ಇದ್ದಾರೆ. ಕ್ಷೇತ್ರದಲ್ಲಿ ವಿಜಯ ಶಂಕರ್ ಅವರಿಗೆ ಉತ್ತಮ ಬೆಂಬಲ ಮೂಡಿ ಬಂದಿದ್ದು, ಈ ಬಾರಿ ಅವರ ಗೆಲುವು ನಿಶ್ಚಿತ ಎಂದರು.
ಆದ್ದರಿಂದ ಜಿಲ್ಲೆಯ ಮತದಾರ ಬಾಂಧವರು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲುವಿಗೆ ಕಾರಣರಾಗಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಬಿಜೆಪಿ ಮುಖಂಡ ಸೋಮಶೇಖರ್, ಶಿವಪ್ಪ, ಜಯಶಂಕರ್, ಮನೋಹರ್ ಇದ್ದರು.