ವ್ಯಕ್ತಿತ್ವ ವಿಕಸನ ಶಿಬಿರ ಇಂದಿನಿಂದ
ಹಾಸನ: ನಗರದ ರಂಗೋಲಿ ಹಳ್ಳದ ಬ್ರಹ್ಮಕುಮಾರಿ ಆಶ್ರಮ ರಸ್ತೆಯಲ್ಲಿರುವ ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಏ. 5ರಿಂದ 13 ದಿನಗಳ ಕಾಲ ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿ ಶಿಬಿರ ಆರಂಭವಾಗಲಿದೆ ಎಂದು ವ್ಯಕ್ತಿತ್ವ ವಿಕಾಸ ಕೇಂದ್ರದ ಮುಖ್ಯಸ್ಥ ಸುರೇಶ್ ಗುರೂಜಿ ತಿಳಿಸಿದ್ದಾರೆ. ಏ. 5ರ ಸಂಜೆ 6: 30ಕ್ಕೆ ಶಿಬಿರದ ಪರಿಚಯ ಕಾರ್ಯಕ್ರಮವಿದ್ದು, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಗುಣಮಟ್ಟದ ತರಬೇತಿಗಾಗಿ ಶಿಬಿರಾರ್ಥಿಗಳ ಸಂಖ್ಯೆ ಮಿತಿಗೊಳಪಡಿಸಲಾಗಿದೆ ಎಂದಿದ್ದಾರೆ. ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುವುದು. ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9448156105 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.