'ಒಪ್ಪಿಗೆಯಾಗದ ವಿಚಾರಗಳಲ್ಲಿ ರಾಜಿ ಆಗದ ಜಗಜೀವನರಾಂ'
ಆಲೂರು: ನೇರ ನಡೆ, ನುಡಿಗೆ ಹೆಸರಾಗಿದ್ದ ಬಾಬು ಜಗಜೀವನರಾಂ ಅವರು ಒಪ್ಪಿಗೆಯಾಗದ ವಿಚಾರಗಳಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ ಎಂದು ತಹಸೀಲ್ದಾರ್ ಟಿ.ಆರ್. ಮಹದೇವಯ್ಯ ಹೇಳಿದರು. ಅವರು ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನ ರಾಮ್‌ರವರ 107ನೇ ವರ್ಷದ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಈಲ್ಲಾ ಮಾದಿಗ ದಂಡೋರ ಸಮಿತಿಯ ಉಪಾಧ್ಯಕ್ಷ ವೆಂಕಟಯ್ಯ ಮಾತನಾಡಿ, ಡಾ. ಬಾಬು ಜಗಜೀವನರಾಂರಂಥ ಮಹನೀಯರು ನಡೆದ ಹಾದಿಯಲ್ಲಿ ಸಾಗಿ ಎಲ್ಲರೂ ಉತ್ತಮ ವ್ಯಕ್ತಿಗಳಾಗಿ ಎಂದರು. ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಇದ್ದರು. ಅಧಿಕಾರಿ ಲೋಕೇಶ್ ಮೂರ್ತಿ ಸ್ವಾಗತಿಸಿದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ವಸಂತ ಕುಮಾರ್ ವಂದಿಸಿದರು.