ಕನ್ನಡ, ಆಂಗ್ಲ ಸಾಹಿತಿಗಳ ಬಗ್ಗೆ ಗೋಡೆ ಬರಹ
ಜಾವಗಲ್: ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮತ್ತು ಆಂಗ್ಲ ಭಾಷಾ ವಿಭಾಗಗಳ ಆಶ್ರಯದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯ ಪ್ರಸಿದ್ಧ ಸಾಹಿತಿಗಳ ಮುಖಪರಿಚಯ ಹಾಗೂ ಸಾಧನೆಗಳ ಬಗ್ಗೆ ಗೋಡೆಬರಹಗಳು ಮತ್ತು ಫೋಟೋ ಪ್ರದರ್ಶನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ರವೀಂದ್ರನಾಥ ಠಾಕೂರ್, ಷೇಕ್ಸ್‌ಪಿಯರ್, ಈಲಿಯಟ್, ಸಾಕ್ರಟೀಸ್, ಕುವೆಂಪು, ಶಿವರಾಮ ಕಾರಂತ್, ದ.ರಾ. ಬೇಂದ್ರೆ, ಆರ್.ಕೆ. ಲಕ್ಷ್ಮಣ್ ಮೊದಲಾದವರ ಜೀವನ ಮತ್ತು ಸಾಧನೆಗಳನ್ನು ಏಕಕಾಲದಲ್ಲಿ ಅರಿಯುವ ಅವಕಾಶ ಕಲ್ಪಿಸಿಕೊಡಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಭಾಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಂಗ್ಲ ಭಾಷ ಸಹ ಪ್ರಾಧ್ಯಾಪಕ ಬಿ. ಶಿವಕುಮಾರ್, ಕನ್ನಡ ಸಹ ಪ್ರಾದ್ಯಾಪಕ ಶಂಕರಲಿಂಗೇಗೌಡ, ಶಿವಶಂಕರಮೂರ್ತಿ, ಸತೀಶ್, ಉಪನ್ಯಾಸಕ ದಯಾನಂದ್, ಪ್ರದೀಪ್, ದಿಲೀಪ್ ಮತ್ತು ವಿದ್ಯಾರ್ಥಿಗಳು ಇದ್ದರು.