ಗ್ರಂಥಾಲಯ ತುರ್ತು ನಿರ್ವಹಣಾ ದೀಪ ವ್ಯವಸ್ಥೆ
ಬೇಲೂರು: ವಿದ್ಯುತ್ ಅಭಾವದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಇಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ತುರ್ತು ನಿರ್ವಹಣಾ ದೀಪ ವ್ಯವಸ್ಥೆಯನ್ನು ಇತ್ತೀಚೆಗೆ ಅಳವಡಿಸಿತು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ತೀಮ್ಮೇಗೌಡ ಮಾತನಾಡಿ, ರೋಟರಿ ಸಂಸ್ಥೆ ಹಲವರು ಸಮಾಜ ಸೇವೆ ಮಾಡುವ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದೆ. ಅದರಂತೆ ಬೇಲೂರು ಶಾಖಾ ಗ್ರಂಥಲಯದಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿತ್ತು. ಇದನ್ನು ಸಂಸ್ಥೆ ತಿಳಿದು ತುರ್ತು ವಿದ್ಯುತ್ ನಿರ್ವಹಣಾ ದೀಪದ ವ್ಯವಸ್ಥೆ ಕೈಗೊಂಡಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಜೀಮ್, ಮೊಗಪ್ಪಗೌಡ, ರಾಜೇಗೌಡ, ಯೋಗೀಶ್, ಗ್ರಂಥಾಪಾಲಕ ಸೋಮಶೇಖರ್ ಇದ್ದರು.