ಚುನಾವಣೆ ಹಿನ್ನೆಲೆಯಲ್ಲಿ 17ರಂದು ಸಂತೆ, ಜಾತ್ರೆ ರದ್ದು
ಹಾಸನ: ಏ.17ರಂದು ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಅರಸೀಕೆರೆ ಮತ್ತು ಬೇಲೂರು ತಾಲೂಕುಗಳ ನಾನಾ ಗ್ರಾಮಗಳಲ್ಲಿ ನಡೆಯುವ ಸಂತೆ ಮತ್ತು ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಸಂತೆಮೈದಾನ, ಅರಕಲಗೂಡು ಮಲ್ಲಿಪಟ್ಟಣ ಹಾಗೂ ಕೊಣನೂರು ಸಂತೆ, ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಸಂತೆ, ಸಕಲೇಶಪುರ ತಾಲೂಕಿನ ಎಪಿಎಂಸಿ ಆವರಣ, ಹೆತ್ತೂರು, ಬೆಳಗೋಡು, ಬಾಳ್ಳುಪೇಟೆಗಳಲ್ಲಿ ನಡೆಯುವ ಸಂತೆ, ಅರಸೀಕೆರೆ ಗಂಡಸಿ ಹ್ಯಾಂಡ್‌ಪೋಸ್ಟ್, ಕಿತ್ತನೆಕೆರೆಯಲ್ಲಿ ಹಾಗೂ ಬೇಲೂರಿನ ಹಗರೆಯಲ್ಲಿ ನಡೆಯುವ ಸಂತೆಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಅರಕಸೀರೆ ತಾಲೂಕಿನ ಯಾದಾಪುರದಲ್ಲಿ ನಡೆಯುವ ಜೇನುಕಲ್ಲು ಸಿದ್ದೇಶ್ವರ ಜಾತ್ರೆ ಹಾಗೂ ಬೇಲೂರು ತಾಲೂಕಿನ ನಟ್ಟೇಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತರಗಟ್ಟಮ್ಮ ಗ್ರಾಮ ದೇವತೆಯ ಜಾತ್ರೆಯನ್ನೂ ರದ್ದುಗೊಳಿಸಿ ಆದೇಶ ನೀಡಲಾಗಿದೆ.