ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾವಗಲ್- ಗೋಕರ್ಣಕ್ಕೆ ನೇರಬಸ್ ವ್ಯವಸ್ಥೆ

Rashmi Kasaragodu
Updated On : 6 Apr 2014, 12:28 pm

ಜಾವಗಲ್: ಜಾವಗಲ್‌ನಿಂದ ಗೋಕರ್ಣಕ್ಕೆ ನೇರ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಜಾವಗಲ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರಿ ನಿಯಂತ್ರಕ ಜಿ.ಎನ್. ರಾಜಶೇಖರ್ ತಿಳಿಸಿದ್ದಾರೆ. ಕುಮುಟ ಡಿಪೋದಿಂದ ಪ್ರತಿ ದಿನ ಬೆಳಗ್ಗೆ 7.30ಕ್ಕೆ ಹೊರಟು ಗೋಕರ್ಣ- ಶಿರಸಿ-ಸಾಗರ- ಶಿವಮೊಗ್ಗ- ಕಡೂರು- ಜಾವಗಲ್ ಹಳೇಬೀಡು ಮಾರ್ಗವಾಗಿ ರಾತ್ರಿ 8ಕ್ಕೆ  ಹಾಸನ ತಲುಪಲಿದೆ. ಹಾಸನದಿಂದ ಪ್ರತಿದಿನ ಬೆಳಗ್ಗೆ 7.30ಕ್ಕೆ ಹೊರಟು, ಹಳೆಬೀಡು-ಜಾವಗಲ್- ಕಡೂರು-ಶಿವಮೊಗ್ಗ- ಸಾಗರ-ಶಿರಸಿ-ಕುಮುಟ ಮಾರ್ಗವಾಗಿ, ರಾತ್ರಿ 7ಕ್ಕೆ ಗೋಕರ್ಣ ತಲುಪಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement