ಟೀ ಎಸ್ಟೇಟ್ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿ
ಸಕಲೇಶಪುರ: ತಾಲೂಕಿನ ಕಾಡುಮನೆ ಟೀ ಎಸ್ಟೇಟಿನಲ್ಲಿ ಕಾರ್ಮಿಕರಿಗೆ ಇತ್ತೀಚೆಗೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹಾಸನ ಉಪವಿಭಾಗದ ಕಾರ್ಮಿಕ ಅಧಿಕಾರಿ ಕೆ.ಎನ್. ಪ್ರಹ್ಲಾದ ಹಾಗೂ ಕಾರ್ಮಿಕ ನಿರೀಕ್ಷಕ ವಿಜಯ್ ಕುಮಾರ್ ಅವರು ಕಾಡುಮನೆ ಟೀ ತೋಟಕ್ಕೆ ಭೇಟಿ ನೀಡಿ ಆಡಳಿತವರ್ಗದವರ ಸಹಕಾರದಿಂದ 520 ಮಂದಿ ಮಹಿಳಾ ಕಾರ್ಮಿಕರಿಗೆ ಹಾಗೂ 32 ಮಂದಿ ಪುರುಷ ಕಾರ್ಮಿಕರಿಗೆ ಒಟ್ಟು 552 ಕಾರ್ಮಿಕರಿಗೆ ಭಾರತದ ಚುನಾವಣಾ ಆಯೋಗ ಪ್ರಕಟಿಸಿರುವ ಕರಪತ್ರಗಳನ್ನು ವಿತರಿಸಿದರು. ಏ. 17ರಂದು ನಡೆಯುವ ಲೋಕಸಭಾ ಚುನಾವಣೆಗೆ ಮತದಾನ ಮಾಡುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಲ್ಲದೇ, ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.