ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಬೂಜಿ ಆದರ್ಶ ಪಾಲಿಸಿ

Rashmi Kasaragodu
Updated On : 6 Apr 2014, 12:31 pm

ಅರಸೀಕೆರೆ: ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬಾಬು ಜಗಜೀನರಾಂ ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಆಚರಿಸಲಾಯಿತು.
ತಹಸೀಲ್ದಾರ್ ನಟರಾಜ್, ತಾಪಂ ಇಓ ಟಿ.ಎನ್. ಮೂರ್ತಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್ ಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ, ಚುನಾಣಾಧಿಕಾರಿ ಶಕೀಲ್ ಅಹಮದ್ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಆದರ್ಶ ಅಳವಡಿಸಿಕೊಳ್ಳಿ: ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿ ಶಕೀಲ್ ಅಹಮದ್ ಮಾತನಾಡಿ, ಬಾಬು ಜಗಜೀವನರಾಮ್ ಅವರ ಮೌಲ್ಯಧಾರಿತ ಜೀವನ ಶೈಲಿ, ಅವರ ಆದರ್ಶ ಗುಣಗಳು ಇತರರಿಗೂ ಅನುಕರಣೀಯವಾಗಿದೆ.
ನಾವೆಲ್ಲರೂ ಅವರ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದರು.
ದಲಿತ ಮುಖಂಡ ರಂಗನಾಥ್ ಮಾತನಾಡಿ, ತುಳಿತಕ್ಕೊಳಗಾದ ಸಮಾಜದ ಪ್ರತಿನಿಧಿಯಾಗಿ ಅವರು ಕೈಗೊಂಡ ನಿರ್ಣಯಗಳು ಆದರ್ಶಪ್ರಾಯವಾಗಿವೆ.
ಆದ್ದರಿಂದಲೇ ಅಂತಹ ಮಹಾನ್ ನಾಯಕರ ಆಚರಣೆಗಳನ್ನು ರಾಷ್ಟ್ರದಾದ್ಯಂತ ಇಂದಿಗೂ ಆಚರಿಸಲಾಗುತ್ತಿದೆ. ಚುನಾವಣಾ ಸಮಯವಾಗಿರುವುದರಿಂದ  ಸರಳ ರೀತಿಯಲ್ಲಿ ಜನ್ಮ ದಿನಾಚರಣೆ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರು, ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement