'ಮೋದಿ ಪ್ರಧಾನಿಯಾಗುವ ಸ್ಪಷ್ಟ ಸೂಚನೆ ಕಾಣುತ್ತಿದೆ'
ಚನ್ನರಾಯಪಟ್ಟಣ: ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗುವ ಸ್ಪಷ್ಟ ಸೂಚನೆ ಕಾಣುತ್ತಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ತಿಳಿಸಿದರು.
ಅವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಇತ್ತೀಚೆಗೆ ಮಾತಯಾಚನೆ ಮಾಡಿ ಮಾತನಾಡಿದರು.
ದೇವೇಗೌಡರು ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಬಹುದಿತ್ತು ಎಂಬುದು ನನ್ನ ಅಭಿಪ್ರಾಯ. ಚುನಾವಣೆಯಲ್ಲಿ ಸ್ಪರ್ಧಿಸಲು ಯುವಕರಿಗೆ ಅವಕಾಶ ನೀಡಬಹುದಾಗಿತ್ತು ಎಂದರು.
ಮಾಜಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಲೂಕು ಅಧ್ಯಕ್ಷ ಓಬಳಾಪುರ ರಂಗೇಗೌಡ, ಪರಮಗಂಗಾಧರ್, ವಿಜಯಕುಮಾರ್, ಮಾಸ್ತಿಗೌಡ, ಡಿ. ಎಂ. ರವಿ, ನಂಜುಂಡಮೈಮ್, ಶೋಭಾ ಶುಭಕರ್, ರಾಜ್ ಕುಮಾರ್, ಕನ್ನಡವಾಸು ಇತರರು ಇದ್ದರು.