ಸಂಹಿತೆ ಉಲ್ಲಂಘನೆ?
ನೀತಿ ಸಂಹಿತೆ ಹಿನ್ನೆಲೆಯಲ್ಲಿ, ಪಕ್ಷದ ಯಾವ ಅಭ್ಯರ್ಥಿ ಪರ ಕಟೌಟ್ ಹಾಗೂ ಬ್ಯಾನರ್ ಇತರೆ ಪ್ರದರ್ಶಿಸುವಂತಿಲ್ಲ. ಆದರೆ ಹಾಸನ ನಗರದ ಎಂ.ಜಿ. ರಸ್ತೆ ಬಳಿ ಇರುವ ಕನಕದಾಸ ವಿದ್ಯಾರ್ಥಿ ನಿಲಯ ಹಾಗೂ ಜಿಲ್ಲಾ ಕುರುಬರ ಸಂಘದ ಕಟ್ಟಡದ ಮುಂಭಾಗ ಕಾಂಗ್ರೆಸ್ ಮುಖಂಡರ ಭಾವಚಿತ್ರ ಉಳ್ಳ ಕಟೌಟ್ ರಾರಾಜಿಸುತ್ತಿತ್ತು.