ಸಮಸ್ಯೆ ಹೀಗಿದೆ...
ವಿದ್ಯಾಭ್ಯಾಸ, ಸ್ಥಳೀಯವಾಗಿ ಆರೋಗ್ಯ ಆಸ್ಪತ್ರೆಗಳ ಕೊರತೆ ಹಾಗೂ ಇತರೆ ಮೂಲಭೂತ ಸೌಕರ್ಯಗಳಿಂದ ಗ್ರಾಮಗಳು ದೂರವಾಗಿಯೇ ಉಳಿದಿವೆ. ಈ ಗ್ರಾಮಸ್ಥರು ಬಸ್ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ. ಬಸ್ಗಾಗಿ ಕಿ.ಮೀ.ನಷ್ಟು ನಡೆದುಕೊಂಡ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಮಳೆಗಾಲದಲ್ಲಿ ಕಾಲು ರಸ್ತೆಯಲ್ಲಿಯೇ ನೀರು ತುಂಬಿಕೊಂಡು ಕೆರೆಯಂತೆ ನಿರ್ಮಾಣವಾಗಲಿದ್ದು, ಅಲ್ಲಿ ಸೇತುವೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು