ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಾಲು ಮರಗಳನ್ನು ಕತ್ತರಿಸಿ'

Rashmi Kasaragodu
Updated On : 6 Apr 2014, 12:31 pm

ಬೇಲೂರು: ಪಟ್ಟಣದ ಸಮೀಪವಿರುವ ಬೇಲೂರು ಸಕಲೇಶಪುರ ರಾಜ್ಯ ಹೆದ್ಧಾರಿ ರಸ್ತೆ ಬದಿಯ  ಸಾಲು ಮರಗಳು ಬೆಳೆದು ನಿಂತಿದ್ದು ಸಾರ್ವಜನಿಕರ ಜೀವ ತೆಗೆಯುವ ಮೃತ್ಯ ಕೂಪವಾಗಿದ್ದರೂ ಮರಗಳನ್ನು ತೆಗೆಯದೆ ಇರುವ ಅರಣ್ಯ ಇಲಾಖೆಯ ಮೇಲೆ  ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಹಲವರು ಅಪಘಾತಗಳು ನಡೆಯುತ್ತವೆ. ಇದುವರೆಗೂ ಸುಮಾರು ಏಳು ಜನರನ್ನು ಸಾವನ್ನಪ್ಪಿದ್ದು, ಇಂತಹ ಅವಘಡ ಸಂಭವಿಸಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು  ಮರಗಳನ್ನು ತೆಗೆಸುವಲ್ಲಿ ಯಾವುದೇ ಚಿಂತನೆ ನಡೆಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈಗಾಗಲೇ, ಈ ರಸ್ತೆಗೆ ಡಾಂಬರ್ ಹಾಕಿದ್ದು ಮರಕ್ಕೆ ಅಂಟಿಕೊಳ್ಳುವಂತೆ ಡಾಂಬರ್ ಹಾಕಿದ್ದಾರೆ. ಅಲ್ಲದೇ, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿದ್ದು, ಮರಗಳನ್ನು ತೆಗೆದರೆ ಚರಂಡಿ ಸಂಪೂರ್ಣ ಕಿತ್ತುಹೋಗುತ್ತದೆ. ಇದನ್ನು ಲೆಕ್ಕಿಸದೆ ಚರಂಡಿ ಮಾಡಲಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ: ಬೇಲೂರು ಸಕಲೇಶಪುರ ಮಾರ್ಗದಲ್ಲಿ ಸನ್ಯಾಸೀಹಳ್ಳಿ, ತಗರೆ, ಕೋಗಿಲೆಮನೆ, ಬಿಕ್ಕೋಡು ಮಾರ್ಗವಾಗಿ ಬರುವ ವಾಹನ ಸವಾರರು ಮರಗಳಿಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಹಲವು ಘಟನೆಗಳು ಸಂಭವಿಸಿವೆ. ಇಂತಹ ಅಪಘಾತಗಳು ಈ ರಸ್ತೆಯಲ್ಲಿ ನಡೆಯುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಮರದ ಬುಡಕ್ಕೆ ಡಾಂಬರ್ ಹಾಕಿ ಕೈತೊಳೆದು ಕುಳಿತಿದ್ದಾರೆ. ಈ ರಸ್ತೆಯಲ್ಲಿ ನೂರಾರು ಸಾಲು ಮರಗಳನ್ನು ತೆರವು ಮಾಡಿ ಸುರಕ್ಷತ ಪ್ರಮಾಣಕ್ಕೆ ಅನುವು ಮಾಡುವ ಗೋಜಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ. ಈ ವಿಚಾರವಾಗಿ ಹಲವು ಬಾರಿ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆದಿದ್ದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಕೂಡಲೇ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಿ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಬೇಲೂರು ಸಕಲೇಶಪುರ ರಸ್ತೆಯಲ್ಲಿ ವಾಹನಗಳನ್ನು ತಡೆದು ಉಗ್ರ  ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement