ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೊಳ್ಳೆ ಉತ್ಪತ್ತಿ ನಿರ್ಮೂಲನೆಗೆ ಕರೆ

Rashmi Kasaragodu
Updated On : 6 Apr 2014, 12:27 pm

ಬೇಲೂರು: ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿ ಆರೋಗ್ಯ ವೃದ್ಧಿಗೊಳಿಸಲು ಸಾರ್ವಜನಿಕರು ಮುಂದಾಗುಂತೆ ಸರ್ಕಾರಿ ಆಸ್ಪತ್ರೆಯ ಡಾ. ನರಸೇಗೌಡ ಕರೆ ನೀಡಿದರು. ಆರೋಗ್ಯ ಇಲಾಖೆ, ಪುರಸಭೆ ಆಶ್ರಯದಲ್ಲಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿಮ್ಮಿಂದ ನಿಮಗಾಗಿ ಸೊಳ್ಳೆ ಉತ್ಪತ್ತಿ ನಿರ್ಮೂಲನೆ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬೇಸಿಗೆ ಆರಂಭದಲ್ಲಿ ಡೆಂಗ್ಯೂ,ಮಲೇರಿಯ ಹರಡದಂತೆ ಏಚ್ಚರಿಕೆ ವಹಿಸಿಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಬಸವರಾಜು, ಆರೋಗ್ಯ ಅಧಿಕಾರಿ ವೆಂಕಟೇಶ್, ಆರೋಗ್ಯ ಇಲಾಖೆಯ ಹಕ್ಕಿಯಣ್ಣಕುಮಾರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement