ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೆಬ್ಬಾಳು ಗ್ರಾಮದಲ್ಲಿ ಮತ ಜಾಗೃತಿ ಜಾಥಾ

Rashmi Kasaragodu
Updated On : 6 Apr 2014, 12:28 pm

ಬೇಲೂರು: ಪ್ರಜಾಪ್ರಭುತ್ವದಲ್ಲಿ ದೇಶವನ್ನು ಸುಭದ್ರವಾಗಿ ಕಟ್ಟಲು, ದೇಶದ ಪ್ರತಿಯೊಬ್ಬ ಪ್ರಜೆ ತಪ್ಪದೆ ಮತದಾನ ಮಾಡಬೇಕು ಮತದಾನ ಒಂದು ಪ್ರಕ್ರಿಯೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಹಾಗೂ ಸ್ವೀಪ್ ಸಮಿತಿ ಸದಸ್ಯ ಬೋರಣ್ಣಗೌಡ ತಿಳಿಸಿದರು. ಹೆಬ್ಬಾಳು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಜಾಥಾ ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿ ಹಕ್ಕಿಯಣ್ಣಕುಮಾರ್, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕಿ ಗಿರಿಜಾಮಣಿ, ಭದ್ರೇಗೌಡ, ಆಶಾ ಕಾರ್ಯಕರ್ತೆ ಸಿದ್ದಮ್ಮ, ಅಂಗನವಾಡಿ ಕಾರ್ಯಕರ್ತೆವಿಶಾಲಾಕ್ಷಿ, ಸೋಮಣ್ಣ, ರಾಜಯ್ಯ, ರಾಮಯ್ಯ, ದೇವರಾಜು ಹಾಗೂ ಇತರರು ಇದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮತದಾನದ ಬಗ್ಗೆ ಅರಿವು ಹಾಗೂ ಕರಪತ್ರ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement