ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

15 ರಿಂದ ಎರಡು ದಿನ ಮದ್ಯ ನಿಷೇಧ

Rashmi Kasaragodu
Updated On : 7 Apr 2014, 12:31 pm

ಹಾಸನ: ಲೋಕಸಭಾ ಸಾರ್ವತ್ರಿಕ ಚುನಾವಣೆ- 2014  ಈ ಹಿನ್ನೆಲೆಯಲ್ಲಿ ಏ.17 ರಂದು ಮತದಾನ ಕಾರ್ಯ ನಡೆಯಲಿದ್ದು, ಏ.15 ರಂದು ಸಂಜೆ 6 ರಿಂದ  ಏ.17 ರ  ಮಧ್ಯರಾತ್ರಿ 12 ರವರೆಗೆ  ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ  ಮದ್ಯ ಹಾಗೂ ಉತ್ತೇಜಕ ನಿಷೆ ತರುವ ಅಮಲು ಪಾನೀಯಗಳನ್ನು ಸಂಗ್ರಹಿಸಿಡುವುದು ಹಾಗೂ ಶೇಖರಿಸುವುದು ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಅಂಗಡಿಗಳಲ್ಲಿ, ಕ್ಲಬ್‌ಗಳಲ್ಲಿ, ಡಾಬಾಗಳಲ್ಲಿ, ಬಾರ್‌ಗಳಲ್ಲಿ, ಸ್ಟಾರ್ ಹೊಟೇಲ್‌ಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ, ಹೊಟೇಲ್‌ಗಳಲ್ಲಿ, ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಮದ್ಯ ಸಾಗಾಟ ಹಾಗೂ ಸರಬರಾಜು ಮಾಡುವುದನ್ನು ಜಿಲ್ಲಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವಿ.ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement