21 ರಿಂದ ಬೇಸಿಗೆ ವಿಜ್ಞಾನ ಶಿಬಿರ
ಹಾಸನ: ಸಕಲೇಶಪುರ ತಾಲೂಕಿನ ದೋನಳ್ಳಿಯ ಸುಂದರ ನಿಸರ್ಗಧಾಮವಾದ ಹುಳ್ಳಿಮಕ್ಕಿ ಹೋಂ ಸ್ಟೇಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಏ.21 ರಿಂದ 24 ರವರೆಗೆ ಪ್ರೌಢಶಾಲಾ ಮಕ್ಕಳಿಗಾಗಿ ಸನಿವಾಸ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಗಣಿತದಲ್ಲಿ ಆನಂದ, ವಿನೋದ ವಿಜ್ಞಾನ, ಖಗೋಳ ಪ್ರಯೋಗ, ಓರಿಗಾಮಿ ಮತ್ತು ಕ್ರಿಯಾತ್ಮಕತೆ, ಕಥೆ ಕಟ್ಟೋಣ-ನಾಟಕ ಆಡೋಣ, ಪವಾಡ ರಹಸ್ಯ ಬಯಲು, ಸಂವಾದ-ರಸಪ್ರಶ್ನೆ, ನಿಸರ್ಗ ಕೌತುಕಗಳು, ಪರಿಸರ ಅಧ್ಯಯನ, ಟ್ರಕ್ಕಿಂಗ್, ಪಕ್ಷಿ ವೀಕ್ಷಣೆ, ಆಕಾಶ ವೀಕ್ಷಣೆ, ಸಿನೆಮಾ-ಕಿರುಚಿತ್ರ ನಿರ್ಮಾಣ ಚಟುವಟಿಕೆ ಮಾದರಿ, ಪಿಪಿಟಿ, ಹಾಡು-ಆಟಗಳು ಹಾಗೂ ಪ್ರಾಯೋಗಿಕವಾಗಿ ಕಲಿಸಲಾಗುವುದು ಆಸಕ್ತ ವಿದ್ಯಾರ್ಥಿಗಳು ಏ.15 ರೊಳಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಸಾಫ್ಟೆಕ್ ಕಂಪ್ಯೂಟರ್ ಅಕಾಡೆಮಿ, ಸೀತಾರಾಮಾಂಜನೇಯ ದೇವಸ್ಥಾನ ರಸ್ತೆ ಉತ್ತರ ಬಡಾವಣೆ, ಹಾಸನ. ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ, ದೂ. 94483-46828, 93434-31828.