'ಜಿಲ್ಲೆಯಲ್ಲೆಡೆ ಗೌಡರ ಅಲೆ'
ಹಾಸನ: ಎಚ್.ಡಿ.ದೇವೇಗೌಡರ ಪರ ಜಿಲ್ಲೆಯಲ್ಲೆಡೆ ಅಲೆ ಕಂಡು ಬರುತ್ತಿದೆ. ಈ ಬಾರಿಯ ಚುನಾವಣಾ ವಾತಾವರಣ ನೋಡುತ್ತಿದ್ದರೆ ಗೌಡರು ಭರ್ಜರಿ ಗೆಲವು ದಾಖಲಿಸಲಿದ್ದಾರೆ ಎಂದು ಜೆಡಿಎಸ್ ಸೇವಾದಳ ವಿಭಾಗದ ಸಂಘಟನಾ ಕಾರ್ಯದರ್ಶಿ ಚನ್ನಂಗಿಹಳ್ಳಿ ಶ್ರೀಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸಾಲಗಾಮೆ ಹೋಬಳಿಯಲ್ಲಿ ಭಾನುವಾರ ದೇವೇಗೌಡರ ಪರ ಬಿರುಸಿನ ಪ್ರಚಾರ ನಡೆಸಿದ ಮಾತನಾಡಿದ ಅವರು, ಜಿಲ್ಲೆಯ ಮತದಾರರು ದೇವೇಗೌಡರ ಪರ ಒಲವು ತೋರಿದ್ದಾರೆ ಎಂದರು.
ತಾಲೂಕಿನ ಸಾಲಗಾಮೆ ಸಂತೆ ಮೈದಾನ, ರಾಮದೇವರಪುರ, ಯಲಗುಂದ, ನಿಟ್ಟೂರು, ಕುದುರುಗುಂಡಿ, ಕರೀಗೌಡನಕೊಪ್ಪಲು, ಬನವಾಸೆ, ಹಿರೇಹಳ್ಳಿ, ಎಗುಡುಗನಹಳ್ಳಿ, ಹಲಸಿನಹಳ್ಳಿ, ಬಂಡೀಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿದಾಗ ಜನತೆ ದೇವೇಗೌರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು. ಜೆಡಿಎಸ್ ಯುವ ಮುಖಂಡ ಜಯಂತ್, ವಕೀಲರಾದ ನಾಗರಾಜು, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.