ಜೆಡಿಎಸ್ಗೆ ಪೊಟ್ಯಾಟೋ ಬೆಂ'ಬಲ'
ಕ.ಪ್ರ. ವಾರ್ತೆ ಅರಕಲಗೂಡು ಏ. 6
ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರಿಗೆ ಪೊಟ್ಯಾಟೋ ಕ್ಲಬ್ ಸಂಪೂರ್ಣ ಬೆಂಬಲ ನೀಡಲಿಗೆ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾ ರಮೇಶ್
ಘೋಷಣೆ ಮಾಡಿದರು.
ಇಲ್ಲಿನ ಹೊನ್ನವಳ್ಳಿ ಸಮೀಪ ಕೆಂಗಟ್ಟೆ ಮೈದಾನದಲ್ಲಿ ಕರೆದಿದ್ದ ಯೋಗಾರವುಶ್ ಅಭಿಮಾನಿಗಳ ಸಭೆಯಲ್ಲಿ ಪೊಟ್ಯಾಟೋ ಕ್ಲಬ್ ಮುಖಂಡ, ತಾಪಂ ಮಾಜಿ ಅಧ್ಯಕ್ಷ ಎಚ್.ಮಾದೇಶ್ ಮಾತನಾಡಿ, ಹಿಂದಿನಿಂದ ಕಾಂಗ್ರೆಸ್ ಮತ್ತು ಜೆಡಿಎಸ್ಗಳಲ್ಲಿ ದುಡಿದು ನೊಂದು ಬಂದಿದ್ದೇವೆ.
ಕಾರ್ಯಕರ್ತರ ಹಿತ ಮತ್ತು ತಾಲೂಕಿನ ಅಭಿವೃದ್ಧಿ ಪರವಾಗಿ ಯೋಗಾರವುಶ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಬೇಲೂರೇಗೌಡ, ವಿಶ್ವನಾಥ್, ತಾಪಂ ಮಾಜಿ ಅಧ್ಯಕ್ಷೆ ಗೌರಮ್ಮ ಸೇರಿದಂತೆ ಹಲವು ಮುಖಂಡರು, ನಿಮ್ಮಿಂದ ತಾಲೂಕಿನ ಅಭಿವೃದ್ಧಿ ಸಾಧ್ಯ ಎಂಬ ಆಶಯದೊಂದಿಗೆ ನಿಮ್ಮ ಜೊತೆಗೆ ಬಂದಿದ್ದು, ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಕುರಿತು ಯಾವುದೇ ಪಕ್ಷದೊಂದಿಗೆ ಸ್ಪಷ್ಟ ಭರವಸೆ ದೊರೆತ ನಂತರವಷ್ಟೆ ನಿರ್ಧಾರ ಪ್ರಕಟಿಸಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರವುಶ್, ಬಿಜೆಪಿ ಮತ್ತು ಜೆಡಿಎಸ್ ತಮ್ಮನ್ನು ಆಹ್ವಾನಿಸಿದ್ದು, ಈ ಸಂಬಂಧ ತಾವು ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಪಕ್ಷ ಸೇರುವಂತೆ ಅವರು ತಿಳಿಸಿದ್ದಾರೆ. ಅವರೊಬ್ಬ ಅನುಭವಿ ರಾಜಕಾರಣಿ, ಜನಪರ ಸೇವೆ ಅಗತ್ಯವಿದ್ದು ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳೋಣ ಎಂದು ನುಡಿದು ದೇವೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರಮುಖರ ಗೈರು...
ಅರಕಲಗೂಡು: ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರವುಶ್ ಕರೆದಿದ್ದ ಅಭಿಮಾನಿಗಳ ಸಭೆಯಲ್ಲಿ ಅವರೊಂದಿಗೆ ಆರಂಭದಿಂದಲೂ ಕಾಣಿಸಿಕೊಂಡಿದ್ದ ಹಲವು ಮುಖಂಡರು ಗೈರು ಹಾಜರಾಗಿದ್ದುದು ಎದ್ದು ಕಾಣುತ್ತಿತ್ತು. ಜೆಡಿಎಸ್ನಲ್ಲೇ ಇದ್ದು ಹೊರ ಬಂದು ಯೋಗಾರ ರಮೇಶ್ ಜತೆ ಸಂಘಟನೆಯಲ್ಲಿ ತೊಡಗಿದ್ದ ಮುತ್ತಿಗೆ ರಾಜೇಗೌಡ, ಕಾಂಗ್ರೆಸ್ನಿಂದ ಹೊರಬಂದಿದ್ದ ಚನ್ನಕೇಶವೇಗೌಡ ಸೇರಿದಂತೆ ಹಲವರು ಇಂದಿನ ಸಭೆಯಲ್ಲಿ ಕಾಣಿಸಿಕೊಳ್ಳಲಿಲ್ಲ.