ದೇಶದ ಸುಭದ್ರತೆಗೆ ಬಿಜೆಪಿ ಅನಿವಾರ್ಯ'
ಅರಕಲಗೂಡು: ಬಹುಕಾಲ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ವ್ಯವಸ್ಥಿತವಾಗಿ ಭ್ರಷ್ಟಾಚಾರ ನಡೆಸುತ್ತಾ ಬಂದಿದೆ.ಈ ಮೂಲಕ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದೆ ಎಂದು ಬಿಜೆಪಿ ಮುಖಂಡ ಮರಡಿ ಸೋಮಶೇಖರ್ ಆರೋಪಿಸಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಜರಾತ್‌ನಲ್ಲಿ 15 ವರ್ಷಗಳ ಸಾಧನೆ ಮಾಡಿದ ಸಮರ್ಥ ನಾಯಕ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದು, ಸಮರ್ಥ ನಾಯಕನನ್ನು ಕೊಟ್ಟ ಹೆಗ್ಗಳಿಕೆ ಬಿಜೆಪಿಯದು. ಈ ನಿಟ್ಟಿನಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅವರನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿದರು.
ಬಿಜೆಪಿ ಮುಖಂಡರಾ ಎನ್.ರವಿಕುಮಾರ್ ಮತ್ತಿತರರು ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಕೇಶವೇಗೌಡ, ಪ್ರಧಾನ ಕಾರ್ಯದರ್ಶಿ ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.