ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಜ್ವಲ್-ಜಮೀರ್ ರೋಡ್ ಶೋ

Rashmi Kasaragodu
Updated On : 7 Apr 2014, 12:34 pm

ಹಾಸನ: ಜೆಡಿಎಸ್ ಸ್ಟಾರ್ ಪ್ರಚಾರಕರಾದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಜಮೀರ್ ಅಹಮ್ಮದ್ ಭಾನುವಾರ ನಗರದಲ್ಲಿ ರೋಡ್ ಶೋ ನಡೆಸಿದರು.
ಮೊದಲು ನಗರದ ಆಂಜನೇಯ ದೇವಾಲಯ ಮತ್ತು ಆಜಾದ್ ರಸ್ತೆಯ ದರ್ಗಾದಲ್ಲಿ ಪೂಜೆ ಸಲ್ಲಿಸಿದ ನಂತರ ರೋಡ್ ಶೋಗೆ ಚಾಲನೆ ದೊರಕಿತು.
ನಗರದ ವರ್ಕ್‌ಶಾಪ್ ಹಳ್ಳ, ಶ್ರೀನಗರ ಸರ್ಕಲ್, ಬಂಬೂ ಬಜಾರ್ ಸರ್ಕಲ್, ಬಿ.ಎಂ.ರಸ್ತೆ, ಅಂಬೇಡ್ಕರ್‌ನಗರ, ಮಿರ್ಜಾ ಮೊಹಲ್ಲಾ, ಮಸೀದಿ ಸರ್ಕಲ್, ಇಲಿಯಾಜ್‌ನಗರ, ಚಿಕ್ಕನಾಳು ಮಸೀದಿ ಸರ್ಕಲ್ ಮತ್ತಿತರ ಕಡೆ ರೋಡ್ ಶೋ ನಡೆಯಿತು.
ಸ್ಥಳೀಯ ಶಾಸಕ ಎಚ್.ಎಸ್.ಪ್ರಕಾಶ್, ಜಿಪಂ ಸದಸ್ಯ ಬಿ.ಆರ್.ಸತ್ಯನಾರಾಯಣ, ನಗರಸಭೆ ಉಪಾಧ್ಯಕ್ಷ ಇರ್ಷಾದ್‌ಪಾಷ, ಸದಸ್ಯ ಅನಿಲ್ ಕುಮಾರ್, ಪ್ರಸನ್ನಕುಮಾರ್, ಸೈಯ್ಯದ್ ಅಕ್ಬರ್, ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಹೊಂಗೆರೆ ರಘು ಇತರರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲೆ ಜೆಡಿಎಸ್ ಕಾರ್ಯಕರ್ತರು ಎಚ್.ಡಿ.ದೇವೇಗೌಡರ ಪರ ಜಯಕಾರ ಹಾಕಿದರು. ದೇವೇಗೌಡರ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ರೋಡ್ ಶೋ ಯಶಸ್ವಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement