ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಬಿಜೆಪಿ ಗೆಲ್ಲಿಸಿದ್ದಲ್ಲಿ ಅಭಿವೃದ್ಧಿಯತ್ತ ಹಾಸನ'

Rashmi Kasaragodu
Updated On : 7 Apr 2014, 12:30 pm

ಹೊಳೆನರಸೀಪುರ: ಮತದಾರ ಪ್ರಭುಗಳು ಮನಸ್ಸು ಮಾಡಿದಲ್ಲಿ ರಾಜಕಾರಣದಲ್ಲಿ ಯಾವುದೇ ರೀತಿಯ ಬದಲಾವಣೆ ಸಾಧ್ಯವಿದ್ದು, ಈ ಚುನಾವಣೆಯಲ್ಲಿ ತಮಗೆ ಗೆಲವು ನೀಡಿದಲ್ಲಿ ಕಾಳಜಿ ಹಾಗೂ ಬದ್ಧತೆಯಿಂದ ಆತ್ಮವಂಚನೆ ಇಲ್ಲದೇ ಕ್ಷೇತ್ರದ ಜನರು ಮೆಚ್ಚುವಂತೆ ಕೆಲಸ ಮಾಡುವೆ ಎಂದು ಹಾಸನ ಬಿಜೆಪಿ ಅಭ್ಯಥಿ ಸಿ.ಎಚ್.ವಿಜಯಶಂಕರ್ ಅಭಿಪ್ರಾಯಪಟ್ಟರು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ಸಂಚರಿಸಿ ಮತಯಾಚನೆ ನಡೆಸಿದ ಬಳಿಕ ಪಟ್ಟಣದಲ್ಲಿ ಮಾತನಾಡಿದ ಅವರು, ತಮಗೆ ಕ್ಷೇತ್ರದ ಮತದಾರರು ಆಶೀರ್ವದಿಸಿದಲ್ಲಿ ಆದರ್ಶ ರಾಜಕಾರಣ ಎತ್ತಿ ಹಿಡಿದು, ದ್ವೇಷ ರಾಜಕಾರಣದಿಂದ ಈ ಜಿಲ್ಲೆಯನ್ನು ಮುಕ್ತಗೊಳಿಸಿ ಮಾದರಿ ಲೋಕಸಭಾ ಕ್ಷೇತ್ರ ಮಾಡುವೆ ಎಂದು ತಿಳಿಸಿದರು. ಕೇಂದ್ರದಲ್ಲಿ ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ. ನರೇಂದ್ರಮೋದಿ ಈ ದೇಶದ ಪ್ರಧಾನಿಯಾಗುವುದು ಕೂಡ ಅಷ್ಟೇ ಸತ್ಯ ಎಂದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಹೊರತಾಗಿ ಈ ಬಾರಿ ತಮಗೆ ಒಂದು ಅವಕಾಶವನ್ನು ಈ ಕ್ಷೇತ್ರದ ಮತದಾರರು ನೀಡಿ ಆಶೀರ್ವದಿಸುವ ಭರವಸೆ ಇದೆ ಎಂದರು.
ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಮಹೇಶ್ ಹಾಗೂ ರೇವಣ್ಣ ಬಿಜೆಪಿ ಸೇರ್ಪಡೆಗೊಂಡು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು.
ಜಿಲ್ಲಾ ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಾರಗೌಡನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಮೈಲಾರಯ್ಯ, ತಾಲೂಕು ಬಿಜೆಪಿಯ ತೀರ್ಥೇಶ್, ದಿವಾಕರ್, ಕೃಷ್ಣಪ್ಪ, ನಾಗರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement