ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಜೆಪಿ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಪರ ಪ್ರಚಾರ ಮಾಡುವೆ

Rashmi Kasaragodu
Updated On : 7 Apr 2014, 12:30 pm

ಹಾಸನ: ನಾನು ಬಿಜೆಪಿ ಪಕ್ಷದ ಸಿಪಾಯಿ. ನನ್ನ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಯೋಗ್ಯ ಹಾಗೂ ಸಜ್ಜನ. ಅವರಿಗೆ ಮತ ನೀಡಲು ಕೋರುತ್ತಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಬಿ. ಶಿವಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರೊಡನೆ ಮಾತನಾಡಿದ್ದು, ಏ.9 ರಂದು ನಗರಕ್ಕೆ ಬರುತ್ತಿದ್ದೇನೆ, ನೀವು ಬನ್ನಿ ಎಂದು ಹೇಳಿದ್ದಾರೆ. ಹೋಗುವೆ. ಏ.27 ರಂದು ನನ್ನ ಮೊಮ್ಮಗಳ ವಿವಾಹ ಇದೆ. ಈ ನಿಟ್ಟಿನಲ್ಲಿ ಪ್ರಚಾರದತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಸಂಪರ್ಕಿಸಿದವರಿಗೆ ಮತ್ತು ನಾನು ಹೋದ ಕಡೆ ಬಿಜೆಪಿಗೆ ಮತ ನೀಡಬೇಕೆಂದು ಹೇಳುತ್ತಿದ್ದೇನೆ ಎಂದು ಶಿವಪ್ಪ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದವ. ನನ್ನ ಪತ್ನಿ ರಾಜ್ಯ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಇಬ್ಬರು ಹಿಂದಿನಿಂದಲೂ ಪಕ್ಷಕ್ಕೆ ದುಡಿದಿದ್ದೇವೆ. ಈಗಲೂ ದುಡಿಯುತ್ತಿದ್ದೇವೆ. ಏನೇ ಇರಲಿ ನಾನೊಬ್ಬ ಪಕ್ಷದ ಸಿಪಾಯಿ. ಈ ನಿಟ್ಟಿನಲ್ಲಿ ಪಕ್ಷಬೆಂಬಲಿಸುವುದಾಗಿ ಶಿವಪ್ಪ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement