'ವಿಕೇಂದ್ರೀಕರಣ ದುರ್ಬಳಕೆ ಸಲ್ಲ'
ಹಾಸನ: ಆತ್ಮಸ್ಥೈರ್ಯದಿಂದ ಎಲ್ಲರೂ ಒಗ್ಗೂಡಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ಗೌಡ ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ಕ್ಷೇತ್ರ ಅಧ್ಯಯನ ಕುರಿತು ಇತ್ತೀಚೆಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅಧಿಕಾರ ಹಂಚಿಕೆ ಆಗಿದೆ. ಆದರೆ, ಕೆಲವೊಮ್ಮೆ ಅಧಿಕಾರ ವಿಕೇಂದ್ರೀಕರಣದಲ್ಲಿ ದುರ್ಬಳಕೆ ಆಗುತ್ತಿದೆ ಎಂದು ವಿಷಾದಿದರು. ಹಳ್ಳಿ ಉದ್ಧಾರವಾದರೆ, ರಾಮರಾಜ್ಯ ಆಗುತ್ತದೆ ಎಂಬ ಗಾಂಧೀಜಿ ಕಂಡ ಕನಸು ನನಸಾಗಬೇಕು ಆಶಯ ವ್ಯಕ್ತಪಡಿಸಿದರು.
ಗೊರೂರು ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಆರ್. ಚಂದ್ರಶೇಖರ್, ಪ್ರಭಾರಿ ಪ್ರಾಂಶುಪಾಲ ಬಿ.ಎಸ್. ರಮೇಶ್, ಪಿ.ಜಿ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸಿ.ಎಸ್. ಶಿವೇಗೌಡ, ಪಿ.ಜಿ. ರಾಜ್ಯಶಾಸ್ತ್ರ ವಿಭಾಗ ಸಂಯೋಜಕ ಉದಯ್ಕುಮಾರ್, ಎಂ.ಕೆ. ಹರೀಶ್ ಇತರರು ಇದ್ದರು.