ವೇದಿಕೆ ಹಂಚಿಕೊಂಡ ರೇವಣ್ಣ
ಯೋಗಾರವುಶ್ ಬೆಂಬಲಿಗರ ಸಭೆಗೆ ಆಗಮಿಸಿದ ಶಾಸಕ ಎಚ್.ಡಿ.ರೇವಣ್ಣ, ತಮ್ಮ ತಂದೆ ಬೆಂಬಲಿಸುವಂತೆ ಮನವಿ ಮಾಡಿಕೊಂಡರು. ಈ ವೇಳೆ ಯೋಗಾರವುಶ್ ಬೆಂಬಲಿಗರು ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಭರವಸೆ ನೀಡುವಂತೆ ಮಾಡಿದ ಒತ್ತಾಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ರೇವಣ್ಣ, ದೇಶದಲ್ಲಿ ತೃತೀಯ ರಂಗದ ಸರ್ಕಾರ ರಚನೆಯಾಗುವ ಸಾಧ್ಯತೆ ಇದ್ದು ದೇವೇಗೌಡರು ಮತ್ತೆ ಪ್ರಧಾನಮಂತ್ರಿ ಆಗುವ ಅವಕಾಶವಿದೆ ದಯಾಮಾಡಿ ಬೆಂಬಲಿಸಿ ಎಂದು ಮನವಿ ಮಾಡಿದರು.