ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನಿಲ ಸೋರಿಕೆ ತಡೆ ಯಶಸ್ವಿ

Mainashree
Updated On : 8 Apr 2014, 12:20 pm

ಸಕಲೇಶಪುರ: ಅನಿಲ ಟ್ಯಾಂಕರ್ ಪ್ರಪಾತಕ್ಕೆ ಬಿದ್ದ ಹಿನ್ನೆಲೆಯಲ್ಲಿ, ಭಾನುವಾರ ಬಂದ್ ಆಗಿದ್ದ ರಾಷ್ಟ್ರಿಯ ಹೆದ್ದಾರಿ 48, ಸೋಮವಾರ ವಾಹನ ಸಂಚಾರಕ್ಕೆ ತೆರವುಗೊಂಡಿದೆ.
ತಾಲೂಕಿನ ಕಪ್ಪಳ್ಳಿ ಗ್ರಾಮ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ಅನಿಲ ಸೊರಿಕೆಯಾಗಲಾರಂಭಿಸಿದ್ದರಿಂದ ಹೆದ್ದಾರಿ ಸಂಚಾರವನ್ನು  ನಿರ್ಬಂಧಿಸಲಾಗಿತ್ತು.
ಭಾನುವಾರ ಇಡೀ ದಿನ ಒಂದು ಅಗ್ನಿಶಾಮಕ ದಳ ಹಾಗೂ ರಕ್ಷಣಾ ಪಡೆ ಅನಿಲ ಪರಿಸರಕ್ಕೆ ಹರಡದಂತೆ ಕಾರ್ಯಾಚರಣೆ ನಡೆಸಿತು. ಹಿಂದೂಸ್ಥಾನ ಪೆಟ್ರೋಲಿಯಂ ಅಧಿಕಾರಿಗಳ ತಂಡ ಸ್ಥಳಕ್ಕಾಮಿಸಿತ್ತು. ಹೆಚ್ಚಿನ ಕಾರ್ಯಾಚರಣೆಗಾಗಿ ಮಂಗಳೂರಿನಿಂದ 6 ಅಗ್ನಿ ಶಾಮಕದಳದ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಟ್ಯಾಂಕರ್‌ನಿಂದ ಹೆಚ್ಚಿನ ಅನಿಲ ಹೊರಬಿಟ್ಟು ತಕ್ಷಣವೇ ಅನಿಲವನ್ನು ಮಂಜುಗೆಡ್ಡೆ ಮಾಡುವ ಮೂಲಕ ಸಂಜೆ 3ರ ವೇಳೆಗೆ ಬಹುತೇಕ ಟ್ಯಾಂಕರ್‌ನಲ್ಲಿದ್ದ ಅನಿಲವನ್ನು ಹೊರತೆಗೆಯಲಾದ ನಂತರ ನಾಲ್ಕು ಗಂಟೆಗೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.
ಕಳೆದ 48 ಗಂಟೆಯಿಂದ ಶಿರಾಡಿ ಘಾಟ್‌ರಸ್ತೆಯಲ್ಲಿ ಸಿಲುಕಿದ್ದ ನೂರಾರು ಲಾರಿಗಳು ಸಂಚಾರ  ರಸ್ತೆ ತೆರವುಗೊಂಡಿದ್ದರಿಂದ ಪೈಪೋಟಿಯಲ್ಲಿ ಸಂಚಾರ ಆರಂಭಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement