ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಕಸ್ಮಿಕ ಬೆಂಕಿಗೆ ಹುಲ್ಲಿನ ಮೆದೆ ಭಸ್ಮ

Mainashree
Updated On : 8 Apr 2014, 12:21 pm

ದಿಡಗ (ಚನ್ನರಾಯಪಟ್ಟಣ ತಾ.): ಆಕಸ್ಮಿಕ ಬೆಂಕಿ ತಗುಲಿ ರಾಗಿ ಹುಲ್ಲಿನ ಮೆದೆ  ಭಸ್ಮಗೊಂಡ ಘಟನೆ ಸಮೀಪದ ನಾಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ  ಸಂಭವಿಸಿದೆ.
ಗ್ರಾಮದ ನಿವಾಸಿ ನಿಂಗೇಗೌಡ ಎಂಬವರಿಗೆ ಸೇರಿದ್ದು, ಮನೆಯ ಪಕ್ಕದಲ್ಲೇ ಇದ್ದ ರಾಗಿಹುಲ್ಲಿನ ಮೆದೆಗೆ ಬೆಳಗಿನ ಜಾವ 3.45 ರ ಸುಮಾರಿನಲ್ಲಿ ಇದ್ದಕಿದ್ದಂತೆಯೇ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ.
ಮನೆಯವರ ಕೂಗಾಟ ಕೇಳಿಸಿಕೊಂಡ ಗ್ರಾಮಸ್ಥರೆಲ್ಲಾ ಧಾವಿಸಿ ತೆಂಗಿನ ಹಸಿ ಸೋಗೆಯಿಂದ ಬಡಿಯುವ ಹಾಗೂ ನೀರು ಎರಚುವ ಮೂಲಕ ಬೆಂಕಿ ನಂದಿಸಲು ಮುಂದಾದರು.
ಬೇಸಿಗೆಯ ಧಗೆ ಹಾಗೂ ಜೋರಾಗಿ ಬೀಸುವ ಗಾಳಿಯಿಂದಾಗಿ ಬೆಂಕಿ ಮುಗಿಲು ಮುಟ್ಟುವಂತೆ ಉರಿಯತೊಡಗಿದೆ.  ತಕ್ಷಣ ಚನ್ನರಾಯಪಟ್ಟಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ತಿಳಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ವರ್ಗದವರು ಸುಮಾರು ಒಂದು ಗಂಟೆ ಕಾಲ ಸುಧೀರ್ಘ ಪ್ರಯತ್ನ ಮಾಡಿ ಮುಗಿಲು ಮುಟ್ಟುವಂತೆ ಅಬ್ಬರಿಸುತ್ತಾ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.ಸುಮಾರು ಏಳು ಮಾರು ರಾಗಿ ಹುಲ್ಲಿನ ಮೆದೆ ಜತೆಗೆ 60 ಕಟ್ಟು ಜೋಳದ ಕಂತೆಗಳು ಭಸ್ಮವಾಗಿದ್ದು, ರು. 75 ಸಾವಿರಗಿಂತಲೂ ಹೆಚ್ಚು ನಷ್ಟ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement