ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲೆಕ್ಷನ್ ಸಹವಾಸ ಬೇಡ...

Mainashree
Updated On : 8 Apr 2014, 12:21 pm

ಹೊಳೆನರಸೀಪುರ: ತಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ತೋರಿರುವ ನಿರ್ಲಕ್ಷತೆಯನ್ನು ಖಂಡಿಸಿ ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಬೀರನಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಹಿನ್ನೆಲೆಯಲ್ಲಿ, ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಗ್ರಾಮಸ್ಥರು, ಕಳೆದ ಮೂವತ್ತು ವರ್ಷಗಳಿಂದಲೂ ತಮ್ಮ ಮತಗಳನ್ನು ಪಡೆದ ಜನಪ್ರತಿನಿಧಿಗಳು ತಮ್ಮ ಗ್ರಾಮವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷತೆ ತೋರಿದ್ದಾರೆ ಎಂದು ಆರೋಪಿಸಿರು.
ಗ್ರಾಮದಲ್ಲಿ ಸುಮಾರು 500ರಷ್ಟು ಮತದಾರರು ಇದ್ದು, ಇಲ್ಲಿ ವಾಸ ಮಾಡುವವರಲ್ಲಿ ಹೆಚ್ಚಿನವರು ಕುರುಬ ಸಮಾಜವರು. ಆದ್ದರಿಂದಲೇ ಗ್ರಾಮದ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೀಗಿದೆ ಅವ್ಯವಸ್ಥೆ: ಕಳೆದ ಇಪ್ಪತ್ತು ವರ್ಷಗಳ ಹಿಂದೆ ಡಾಂಬರು ಹಾಕಿದ್ದ ರಸ್ತೆ ಇಂದು ಗುಂಡಿಗಳಿಂದ ತುಂಬಿದೆ. ಮೂಲಭೂತವಾಗಿ ಬೇಕಾದ ಕುಡಿಯುವ ನೀರು, ಚರಂಡಿ, ವಿದ್ಯುತ್ ಸರಿಯಾಗಿ ಇಲ್ಲ. ಇಲ್ಲಿ ವಾಸ ಮಾಡಲು ಯೋಗ್ಯವಾದ ಪರಿಸರ ಇಲ್ಲದೆ ಗ್ರಾಮದ ಜನತೆ ತೊಳಲಾಡುವಂತಾಗಿದೆ ಎಂದು ದೂರಿದರು.
ಸಾಕಷ್ಟು ವರ್ಷ ಸಂಸದರಾಗಿ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ಕುಟುಂಬ ಸಹ ತಾವು ಕುರುಬರು ಎಂಬ ಒಂದೇ ಕಾರಣದಿಂದ ನಮ್ಮ ಗ್ರಾಮಕ್ಕೆ ದೊರಕಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡದೇ ನೆನೆಗುದಿಗೆ ಬಿಟ್ಟಿದ್ದಾರೆ.
ಕಳೆದ ನಾಲ್ಕು ಚುನಾವಣೆಗಳಲ್ಲಿಯೂ ಇಲ್ಲಿಗೆ ಬರುವ ವಿವಿಧ ಪಕ್ಷದ ಅಭ್ಯರ್ಥಿಗಳು ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ, ಮೂಗಿಗೆ ತುಪ್ಪ ಸವರಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಬಹಿಷ್ಕಾರದ ನೇತೃತ್ವವನ್ನು ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರಾದ ರಾಜೇಗೌಡ, ನಿಂಗಪ್ಪ, ದೇವರಾಜು, ಸಿದ್ದಣ್ಣ, ನಂಜಪ್ಪ ಮತ್ತು ಕುಮಾರ್ ಮೊದಲಾದವರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement