ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜೆಡಿಎಸ್ ಮತ ಯಾಚನೆ

Mainashree
Updated On : 8 Apr 2014, 12:21 pm

ಹಾಸನ: ಹಾಸನ ಲೋಕಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳಲಾರಂಭಿಸಿದೆ. ಹಾಸನ ತಾಲೂಕಿನ ನಾನಾಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಜೆಡಿಎಸ್‌ನ ಮುಖಂಡರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ನಗರದ ಹೊರವಲಯದ ಗುಡ್ಡೇನಹಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಶಾಸಕ ಎಚ್.ಎಸ್.ಪ್ರಕಾಶ್, ಮಾಜಿ ಶಾಸಕ ಬಿ.ವಿ. ಕರೀಗೌಡ ಸೇರಿದಂತೆ ಜೆಡಿಎಸ್ ಮುಖಂಡರು ದೇವೇಗೌಡರ ಪರ ಮತಯಾಚಿಸಿದರು. ಮೊದಲು ಮಾರಮ್ಮ ಹಾಗೂ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಚುನಾವಣಾ ಪ್ರಚಾರಕ್ಕೆ ತೆರಳಿದರು.
ದೇಗೌಡವರು ರಾಜಕೀಯ ಪ್ರಾರಂಭಿಸಿದಾಗಿನಿದಂಲೂ ರೈತರು, ಬಡವರ ಪರ ಹೋರಾಟ ಮಾಡುತ್ತಿದ್ದಾರೆ. ದೇವೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ವರ್ಗದದವರ ಅಭಿವೃದ್ಧಿಗೆ ಪೂರಕವಾದ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಂದೆಯೂ ಅವರ ಕೈ ಬಲಪಡಿಸಿದರೆ, ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಗೌಡರನ್ನು ಈ ಬಾರಿಯ ಚುನಾವಣೆಯಲ್ಲೂ ಅತ್ಯಧಿಕ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ದೇವೇಗೌಡರಿಗೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ರೈತನ ಮಗನಾಗಿ ಹುಟ್ಟಿ ಅತ್ಯುನ್ನತ ಪ್ರಧಾನಿ ಹುದ್ದೆಗೇರಿದ ಗೌಡರಿಗೆ ಮತ ಹಾಕುವುದೇ ನಮಗೊಂದು ದೊಡ್ಡ ಗೌರವ ಅನ್ನೋ ಮನೋಭಾವನೆ ಜನರಲ್ಲಿ ಮನೆ ಮಾಡಿದೆ ಎಂದರು.
ಆದ್ದರಿಂದ ಈ ಬಾರಿ ದೇವೇಗೌಡರಿಗೆ ಅತ್ಯಧಿಕ ಮತಗಳನ್ನು ಜಯ ಗಳಿಸಲು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement