ಪರಂಪರಾ ಕೂಟ ಸೇವೆಯಿಂದ ಸ್ವಚ್ಛಗೊಂಡ ದೇವಾಲಯ
ಬೇಲೂರು: ತಾಲೂಕಿನ ಹಳೇಬೀಡು ಸಮೀಪದಲ್ಲಿರುವ ಚಟಚಟ್ಟೆಹಹಳ್ಳಿಯಲ್ಲಿರುವ ಐತಿಹಾಸಿಕ ಸ್ಮಾರಕವಾದ ಹೊಯ್ಸಳರ ಕಾಲದ ಚಟ್ಟೇಶ್ವರ ದೇವಾಲಯಕ್ಕೆ ನಗರದ ಎವಿಕೆ ಕಾಲೇಜಿನ ಪರಂಪರಾಕೂಟದ ಸುಮಾರು 35ಜನ ವಿದ್ಯಾರ್ಥಿನಿಯರು ದೇವಾಲಯದ ಆವರಣದಲ್ಲಿದ್ದ ಪಾರ್ಥೇನಿಯಂ ಮತ್ತಿತ್ತರ ಗಿಡ, ಗಂಟೆಗಳನ್ನು ಕಡಿದು ಸ್ವಚ್ಛಗೊಳಿಸಿದರು.
ಘೋಷಣಾಫಲಕ, ಮತ್ತು ಬ್ಯಾನರ್ಗಳನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸ್ಮಾರಕಗಳ ಮಹತ್ವ ಅವುಗಳ ರಕ್ಷಣೆಯ ಜವಾಬ್ದಾರಿ, ಇದರಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ ಇವುಗಳನ್ನು ಕುರಿತು ಘೋಷಣೆ ಕೂಗಿದ್ದಲ್ಲದೆ ಪುರಾತತ್ವ ಇಲಾಖೆಯವರು ಬಿದ್ದುಹೋಗಿದ್ದ ದೇವಾಲಯದ ಕೆಲವು ಭಾಗವನ್ನು ದುರಸ್ಥಿಪಡಿಸಿರುವ ಈ ದೇವಾಲಯದ ಮಹತ್ವವನ್ನು ತಿಳಿಸಿದರು.
ಗ್ರಾಮಸ್ಥರ ಸಹಕಾರ: ತ್ರಿಕೂಟಾಚಲ ದೇವಾಲಯವಾದ ಇದರ ಗರ್ಭಗುಡಿಗಳಲ್ಲಿ ಬ್ರಹ್ಮ, ವಿಷ್ಣು,ಮಹೇಶ್ವರ ವಿಗ್ರಹಗಳಿವೆ. ನಿರ್ಲಕ್ಷಕ್ಕೊಳಗಾಗಿರುವ ಈ ದೇವಾಲಯದತ್ತ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಾ.ಜಯದೇವೇಗೌಡ ತಮ್ಮ ಭಾಷಣದಲ್ಲಿ ತಿಳಿಸಿದರು. ಸಾರ್ವಜನಿಕ ಸಭೆ ಮತ್ತು ಮೆರವಣಿಗೆಯಲ್ಲಿ ಗ್ರಾಮಸ್ಥರು ಸಹಕರಿಸಿದರು.
ನಂತರ ಮತ್ತೊಂದು ಐತಿಹಾಸಿಕ ಸ್ಥಳವಾದ ದೊಡ್ಡಗದವಳ್ಳಿಗೂ ನಮ್ಮ ಪರಂಪರಾಕೂಟ ಭೇಟಿನೀಡಿ ಇಲ್ಲಿರುವ ಹೊಯ್ಸಳ ದೇವಾಲಯ ವೀಕ್ಷಿಸಿ ಗ್ರಾಮದಲ್ಲಿ ಮರವಣಿಗೆ ನಡೆಸಿ ಕರಪತ್ರ ಹಂಚಿ, ಸಾರ್ವಜನಿಕರಲ್ಲಿ ಸ್ಮಾರಕಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.