ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೇವಣ್ಣ ಬಿಡೋದೆಲ್ಲಾ ರೈಲೇ....

Mainashree
Updated On : 8 Apr 2014, 12:22 pm

ಬೇಲೂರು: ತಾವು ಆಗಿನ ಬಿಜೆಪಿ ಸರ್ಕಾರದ ನೀರಾವರಿ ಮಂತ್ರಿ ಮೇಲೆ ಹೆಚ್ಚಿನ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಹಳೇಬೀಡು - ಮಾದಿಹಳ್ಳಿ ಹೋಬಳಿಗೆ ಏತ ನೀರಾವರಿ ಕಾಮಗಾರಿ ಆರಂಭಗೊಳ್ಳಲು ಸಾಧ್ಯವಾಯಿತು. ಆದರೆ, ಈಗ ಮಾಜಿ ಸಚಿವ ಎಚ್.ಡಿ. ರೇವಣ್ಣ ತಮ್ಮಂದಿಲೇ ಕಾಮಗಾರಿ ಆರಂಭಗೊಂಡಿತು ಎಂದು ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಶಾಸಕ ವೈ.ಎನ್. ರುದ್ರೇಶಗೌಡ ಹೇಳಿದರು.
ಕನಾಯಕನಹಳ್ಳಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಳೆಬೀಡು ಮಾದಿಹಳ್ಳಿ ಏತ ನೀರಾವರಿ ಕಾಮಗಾರಿ ಚಾಲನೆಗೆ ಈಗಿನ   ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ಬಳಿ ಹತ್ತಾರು ಬಾರಿ ಓಡಾಡಿ ಒತ್ತಡ ತರಲಾಗಿತ್ತು. ಅದರ ಪರಿಣಾಮ ಸದನದಲ್ಲಿ ಚರ್ಚೆ ನಡೆದ 38 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಕಾಮಗಾರಿಗೆ ಆದೇಶವನ್ನು ನೀಡಲಾಯಿತು.  ಕಾಮಗಾರಿಯ ಆರಂಭಗೊಂಡ ನಂತರ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು.  
ಜಾವಗಲ್ ಕೆರೆಗೂ ನೀರು?: ಈ ಬಗ್ಗೆ ರೈತಸಂಘದವರು ಮುಕ್ತಾಯ ದಿನಾಂಕ ತಿಳಿಸುವಂತೆ ಹೇಳಿದಾಗ ತಾವು 3 ತಿಂಗಳು ಸಮಯವನ್ನು ಕೇಳಿದ್ದೆ. ಆದರೆ ಆ ಸಮಯದಲ್ಲಿ ಮುಗಿಯಲಿಲ್ಲ, ಕಾಮಗಾರಿಯ ವಿಳಂಬಕ್ಕೆ ತಮಗೂ ನೋವಿದೆ.
ರೈತರು ಯಾವುದೇ ಬೇಸರವನ್ನು ಮಾಡಿಕೊಳ್ಳಬಾರದು. ಈಗ ಎಲ್ಲಾ ತಾಂತ್ರಿಕ ಅಂಶಗಳ ಸಮಸ್ಯೆ ಬಗೆ ಹರಿದಿದ್ದು ಇನ್ನು 2ರಿಂದ 3 ತಿಂಗಳಲ್ಲಿ  38 ಕೆರೆಗಳಿಗೆ ನೀರು ಹರಿಯಲಿದೆ. ನಂತರ ಅಲ್ಲಿಂದ ಕಾಮಗಾರಿ ಮುಂದುವರೆಸಿ ಅಡಗೂರು ಹಾಗೂ ಜಾವಗಲ್ ಕೆರೆಗಳಿಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement