ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೀರಶೈವ ಸಮಾಜ ಮುಗಿಸಿದ ಜೆಡಿಎಸ್

Mainashree
Updated On : 8 Apr 2014, 12:22 pm

ವೀರಶೈವ ಸಮಾಜವನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡುವ ಮೂಲಕ ಜೆಡಿಎಸ್ ್ಮುಗಿಸಿದೆ ಎಂದು ದೇವೇಗೌಡರ ವಿರುದ್ದ ಟೀಕಿಸಿದ ಎ. ಮಂಜು, ಜೆ.ಎಚ್.ಪಟೇಲ್, ಬೊಮ್ಮಾಯಿ, ಯಡಿಯೂರಪ್ಪನವರಿಗೆ ಏನಾಯಿತು ಅಂತ ಎಲ್ಲರಿಗೂ ತಿಳಿದಿದೆ. ಅಂದು ವೀರಶೈವರನ್ನು ದೂರ ಮಾಡಿದಕ್ಕೆ ಇಂದು ಕಾಂಗ್ರೆಸ್‌ಗೆ ವೀರಶೈವರು ಆಶೀರ್ವಾದ ಮಾಡಿದ್ದಾರೆ.
ಆಂಬುಲೆನ್ಸ್ ಮತ್ತು ಪೊಲೀಸ್ ಜೀಪ್‌ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ರೇವಣ್ಣ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ ಮಂಜು, ಜೆಡಿಎಸ್ ಮಾಡಿದಂತಹ ಅನುಭವವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಮತದಾರರನ್ನು ಸೆಳೆಯಲು ಈ ರೀತಿ ಆರೋಪ ಮಾಡಿದ್ದಾರೆ ಎಂದರು. ಎ. ಮಂಜು ಓಲೆ ಮಂಜು ಆಗಿದ್ದು, ಚುನಾವಣೆ ನಂತರ ಬಾಯಿಗೆ ಓಲೆ ಹಾಕಿಕೊಳ್ಳಲಿದ್ದಾರೆಂಬ ಜೆಡಿಎಸ್ ಮುಖಂಡ ಜಮೀರ್ ಅಹಮದ್‌ರ ಹೇಳಿಕೆ ಬಗ್ಗೆ ಮಾತಾಡಿದ ಅವರು,  ಜಮೀರ್ ಅಹಮದ್, ಚುನಾವಣೆ ನಂತರ ಎಲ್ಲಿ ಇರುತ್ತಾರೆ ಎಂದು ಕಾದು ನೋಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಂ. ಆನಂದ್, ಮುಖಂಡರಾದ ಡಿ. ಮಲ್ಲೇಶ್, ಎಚ್.ಕೆ. ಜವರೇಗೌಡ, ಬಿ.ಎನ್. ರವಿ, ಖಡಾಖಡೀ ಪೀರ್ಸಾಬ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement