ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಕಲಗೂಡು ಎವೈಸಿಸಿಗೆ ರಘುರಾಂ ಭಟ್ ಭೇಟಿ

Mainashree
Updated On : 23 Apr 2014, 9:49 am

ಅರಕಲಗೂಡು:  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಘುರಾಂ ಭಟ್ ಬುಧವಾರ ಅರಕಲಗೂಡು ಎ.ವೈ.ಸಿ.ಸಿ ಗೆ ಭೇಟಿ ನೀಡಿದ್ದರು.
ಕೆ.ಎಸ್.ಸಿ.ಎ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಿಚ್ ವೀಕ್ಷಿಸಿದ ಅವರು ಈಗಿರುವ ಎರಡೂ ಕ್ರಿಕೆಟ್ ಪಿಚ್‌ಗಳನ್ನು ಅಭಿವೃದ್ಧಿಗೊಳಿಸಿ ಲೀಗ್ ಆಟಕ್ಕೆ ಅನುವು ಮಾಡಲಾಗುವುದು. ಶೀಘ್ರವೇ ಕಾಮಗಾರಿ ನಡೆಸುವ ಭರವಸೆ ಇತ್ತರು.
ಬರುವ ವರ್ಷದಲ್ಲಿ ಅರಕಲಗೂಡು ಪಿಚ್‌ನಲ್ಲಿ ಲೀಗ್‌ಮ್ಯಾಚ್ ನಡೆಸಲಾಗುವುದು ಎಂದೂ ನುಡಿದರು. ಈ ವೇಳೆ ಕೆ.ಎಸ್.ಸಿ.ಎ ಹಾಸನ ಜಿಲ್ಲಾ ಸದಸ್ಯ ಪ್ರಶಾಂತ್ ಸೇರಿದಂತೆ ಎ.ವೈ.ಸಿ.ಸಿ ತಂಡದ ರಕೀಬ್, ಎಂ. ರಮೇಶ್, ರಿಯಾಝ್, ಎಸ್.ಎನ್. ಮಂಜಶೆಟ್ಟಿ, ವಿ. ರಮೇಶ್, ಫಯಾಜ್,ಇಸ್ತಕರ್ ಇತರರು ಇದ್ದು ಅವರನ್ನು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement