'ಶೇಕ್ಸ್‌ಪಿಯರ್ ಬರಹಗಳಿಗೆ ಸಾವಿಲ್ಲ'
ಹಾಸನ: ವಿಲಿಯಮ್ ಶೇಕ್ಸ್‌ಪಿಯರ್ ಸಾವು ಅವರ ದೇಹಕ್ಕೆ ಹೊರತು ಅವರ ಬರವಣೆಗೆಗಲ್ಲ ಎಂದು ಎಂ. ಕೃಷ್ಣ ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರೊ. ವಿಜಯಲಕ್ಷ್ಮಿ ಭಟ್ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಬುಧವಾರ ನಡೆದ ವಿಲಿಯಮ್ ಶೇಕ್ಸ್‌ಪಿಯರ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರೂ ಹುಟ್ಟುತ್ತಾರೆ. ಎಲ್ಲರೂ ಸಾಯುತ್ತಾರೆ.
ಆದರೆ ಕೆಲವರು ಮಹಾನ್ ವ್ಯಕ್ತಿಗಳಾಗಿ ಸಾಯುತ್ತಾರೆ. ಅವರಲ್ಲಿ ವಿಲಿಯಮ್ ಶೇಕ್ಸ್‌ಪಿಯರ್ ಕೂಡ ಒಬ್ಬರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ರೂಪ್ ರಾಜ್ ಚಂದನ್ ಮಾತನಾಡಿ, ಇಡೀ ಪ್ರಪಂಚದ ನಾಟಕರಂಗ, ಬೌದ್ಧಿಕ, ಸಾಂಸ್ಕೃತಿಕ ರಂಗಕ್ಕೆ ಶೇಕ್ಸ್‌ಪಿಯರ್ ಹೆಸರು ಚಿರಪರಿಚಿತ ಎಂದರು.
ಕಾರ್ಯಕ್ರಮದಲ್ಲಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ಪ್ರಸಾದ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಕುಸುಮಾ, ಪ್ರಾಧ್ಯಾಪಕರಾದ ಪದ್ಮಿನಿ, ಸುರೇಶ್, ಸುಲೋಚನಾ, ಸಾವಿತ್ರಿ, ಆಶಾ, ಪೂರ್ಣಿಮಾ, ಚಂದ್ರಶೇಖರ್, ರಮೇಶ್ ನಾಯ್ಕ್, ನಾಗೇಂದ್ರನಾಥ ಗಿರಿ ಹಾಗೂ ಇತರರು ಇದ್ದರು.