ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಕಲೇಶಪುರ ತಾಲೂಕಲ್ಲಿ ಎ. ಮಂಜುಗೆ ಅಧಿಕ ಮತ

Mainashree
Updated On : 23 Apr 2014, 9:50 am

ಸಕಲೇಶಪುರ: ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಅಧಿಕ ಮತಗಳು ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ವಿಶ್ವಾಸ ವ್ಯಕ್ತಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ಆಲೂರು- ಸಕಲೇಶಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತರೆ ಅಭ್ಯರ್ಥಿಗಳಿಗಿಂತ ಅಧಿಕ ಮತ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ವಿರೋಧಿ ಅಲೆ ಪ್ರಕಟ: ಈಗಾಗಲೇ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 120 ಮತದಾನ ಕೇಂದ್ರಗಳಿಗೆ  ಭೇಟಿ ನೀಡಿದ್ದು, ಬಹುತೇಕ ಎಲ್ಲೆಡೆ ನಮ್ಮ ಪಕ್ಷಕ್ಕೆ ಹೆಚ್ಚಿನ ಮತಗಳು ದೊರಕಿವೆ ಎಂದರು. ಅಭಿವೃದ್ಧಿ ಶೂನ್ಯ ಸಂಸದ, ಶಾಸಕರ ವಿರುದ್ಧ ತಾಲೂಕಿನ ಮತದಾರರಲ್ಲಿ ವಿರೋಧಿ ಅಲೆ ಇದ್ದು ಈ ಚುನಾವಣೆಯಲ್ಲಿ ಅದು ಪ್ರಕಟವಾಗಿದೆ ಎಂದರು.  ಕಳೆದ ಎರಡು ದಿನಗಳ ಹಿಂದೆ ನಡೆದ ಕೃಷಿ ವ್ಯವಸಾಯೋತ್ಪನ ಮಾರುಕಟ್ಟೆ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಗೊದ್ದುಲೋಕೇಶ್, ಬಾಗರವಳ್ಳಿ ಲಿಂಗಪ್ಪ, ಗಾಯಿತ್ರಿ ಕಿರಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement