ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರಸ್ವತಿ ಮಹಾರಾಜ್ ಆಗಮನ

Mainashree
Updated On : 23 Apr 2014, 9:48 am

ಹೊಳೆನರಸೀಪುರ:  ಮೈಸೂರಿನ ಶ್ರೀ ಏಕಾಂತಾನಂದಸರಸ್ವತಿ ಮಹಾರಾಜ್ ಅವರು ಪಟ್ಟಣದ ಕೋಟೆ ಏಕಾಂತ ರಾಮೇಶ್ವರ ದೇವಾಲಯದಲ್ಲಿನ ಭಕ್ತ ಮಂಡಳಿಯವರ ಆಹ್ವಾನದ ಮೇರೆಗೆ ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಭಕ್ತಾದಿಗಳು ಆಂಜನೇಯ ದೇವಾಲಯದಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಹಾಗೂ ಮಂಗಳವಾದ್ಯದೊಂದಿಗೆ ನೂರಾರು ಗುರುಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ರಾಜಬೀದಿಗಳಲ್ಲಿ ಶ್ರೀಗಳನ್ನು ಕರೆತರಲಾಯಿತು. ನಂತರ ಆಶೀರ್ವಚನ ನೀಡಿದ ಶ್ರೀ ಏಕಾಂತಾನಂದಸರಸ್ವತಿ ಮಹಾರಾಜ್, ಭಕ್ತಾದಿಗಳು ಗುರುವಿನಿಂದ ಏನೆಲ್ಲಾ ಅಪೇಕ್ಷಿಸುತ್ತಾರೆ. ಸನ್ಮಾರ್ಗದಲ್ಲಿ ನಡೆಯುವಂತೆ ಕೋರಿಕೆ ಸಲ್ಲಿಸುತ್ತಾ ಆದ್ಯಾತ್ಮ ಚಿಂತನೆಯತ್ತ ದಾರಿತೋರಿಸಿ ಒಳ್ಳೆಯ ಉದ್ದೇಶವನ್ನು ಹೊಂದಿ ದೈವಕೃಪೆಗಾಗಿ ಸದ್ಭಾವನೆ ಹಾಗೂ ಮನ-ಪರಿವರ್ತನೆಗಾಗಿ ಹಂಬಲಿಸುತ್ತಿರುತ್ತಾರೆ ಎಂದರು.
ನಾ. ನಾಗೇಂದ್ರ ಕುಮಾರ್ ಗುರುಮಹಿಮೆ ಮತ್ತು ಗುರು ಮಹಿಮಾ ಪ್ರಸಂಗಗಳನ್ನು ಕುರಿತು ಸವಿಸ್ತಾರವಾಗಿ ತಿಳಿಸಿದರು. ನಾ. ಪಟ್ಟಾಭಿರಾಮ ಸ್ವಾಗತಿಸಿದರು. ಹಿರಿಯ ವಕೀಲರಾದ ಎ. ತಾಂಡವೇಶ್ವರ್, ಎಸ್. ವಿಶ್ವನಾಥ್, ಭಗವಾನ್, ರಾಮಚಂದ್ರಶೆಟ್ಟಿ, ಡಾ. ವಿಶ್ವನಾಥ್ ಇದ್ದರು.
ಬಾ.ರಾ. ಸುಬ್ಬರಾಯರು ನಾಲ್ಕು ದಿನ ನಡೆಯುವ ಗಿರಿಜಾ ಕಲ್ಯಾಣ, ಸತ್ಸಂಗ, ಭಜನೆ, ಹರಿಕಥೆ, ಮುಂತಾದ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಭಕ್ತಾದಿಗಳು ಭಾಗವಹಿಸಿ ತಮ್ಮ ಮನಸ್ಸಿನ ಒತ್ತಡದ ಭಾರವನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement