ಆರೋಪಿಗಳ ಬಂಧನಕ್ಕೆ ಆಗ್ರಹ
ಹಾಸನ: ಕಬೀರ್ ಎಂಬ ಯುವಕನ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶುಕ್ರವಾರ ಮಳೆ ನಡುವೆಯೇ ಪ್ರತಿಭಟನೆ ನಡೆಸಿದರು. ಹೇಮಾವತಿ ಪ್ರತಿಮೆ ಬಳಿಯಂದ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಧರಣಿ ನಡೆಸಿ, ಮನವಿ ಸಲ್ಲಿಸಿದರು.
ಆಗ್ರಹ: ಯುವಕರ ಬಳಿ ಯಾವ ಆಯುಧಗಳು ಇಲ್ಲದಿದ್ದರೂ ಎ.ಎನ್.ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನೆ ಮಾಡಿದ ಪ್ರತಿಭಟನಾಕಾರರು, ಮೃತಪಟ್ಟ ಕಬೀರ್ ದೇಹಕ್ಕೆ ಬಿದ್ದಿರುವ ಗುಂಡನ್ನು ಗಮನಿಸಿದರೆ ಹತ್ತಿರ ನಿಲ್ಲಿಸಿಕೊಂಡು ಎದೆಗೆ ಒಡೆಯಲಾಗಿದೆ ಎಂದು ಆರೋಪಿಸಿದರು. ಆತನ ಸಂಬಂಧಿಕರು ಮೃತ ದೇಹವನ್ನು ಪಡೆಯಲು ಬಂದಾಗ ಬಜರಂಗದ ಗುಂಡಾಗಳು ಏಕಾಏಕಿ ದಳಿ ಮಾಡಿ ವಾಹನ ಜಖಂಗೊಳಿಸಿದ್ದಾರೆ. ಇವರ ಕೈವಾಡವೂ ಇದ್ದು, ಪೂರ್ವಯೋಜಿತ ಸಂಚಿನ ಘಟನೆ ಎನ್ನುವ ಅನುಮಾನ ಮತ್ತಷ್ಟು ಅನುಮಾನ ಬರುತ್ತದೆ ಎಂದರು. ಈ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಪೈರೆಟ್ಜ್ ಪಾಷ, ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ಸೂಫಿ ಹಾಗೂ ಇತರರು ಇದ್ದರು.