ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರಿಯಮ್ಮ, ಮಲ್ಲಿಗಮ್ಮದೇವಿ ರಥೋತ್ಸವ

Mainashree
Updated On : 26 Apr 2014, 12:03 pm

ಅರಸೀಕೆರೆ: ಪಟ್ಟಣದ ಗ್ರಾಮದೇವತೆಗಳಾದ ಶ್ರೀಕರಿಯಮ್ಮದೇವಿ ಮತ್ತು ಮಲ್ಲಿಗಮ್ಮದೇವಿಯವರ ಮಹಾ ರಥೋತ್ಸವವು ಗುರುವಾರ ಮಧ್ಯಾಹ್ನ 1 ಗಂಟೆಗೆ ಸಾವಿರಾರು ಭಕ್ತವೃಂದದ ನಡುವೆ ಸಡಗರ ಸಂಭ್ರಮದಿಂದ ನೆರವೇರಿತು.
ಪಟ್ಟಣದ ಗ್ರಾಮದೇವತೆಯ 45ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸಹಸ್ರಾರು ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಿ, ಕಳೆದ 4 ದಿನಗಳಿಂದ ನಡೆದ ವಿವಿಧ ಉತ್ಸಗಳಲ್ಲಿ ಭಾಗವಹಿಸಿ ದೇವರಿಗೆ ನಮನ ಸಲ್ಲಿಸಿದರು.
ಗುರುವಾರ ಬೆಳಗಿನಿಂದಲೇ ಕರಿಯಮ್ಮ ಮತ್ತು ಮಲಿಗೆಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಮಹಾರಥದಲ್ಲಿ ಗ್ರಾಮದೇವತೆ ಶ್ರೀಕರಿಯಮ್ಮ ಮತ್ತು ಮಲ್ಲಿಗಮ್ಮ ದೇವಿಯವರ ಉತ್ಸವಮೂರ್ತಿಗಳನ್ನು ಕೂರಿಸಿದ ಭಕ್ತರು ಶ್ರೀದೇವಿಯ ನಾಮಸ್ಮರಣೆಯಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಮಲ್ಲಿಗಮ್ಮ, ಚೆಲುವರಾಯ, ದೂತರಾಯ ದೇವರುಗಳ ಕುಣಿತ ಮತ್ತು ಕರಡೆವಾದ್ಯ, ಚಿಟ್ಟೆಮೇಳೆ, ತಮಟೆ ವಾದ್ಯಗಳು ಜಾತ್ರೆ ಮಹೋತ್ಸವದಲ್ಲಿ ಜನರಿಗೆ ಆಕರ್ಷಣೆ ನೀಡಿದವು. ರಾಜಕೀಯ ಪಕ್ಷಗಳ ಮುಖಂಡರು ಹೊರತಾಗಿ ಪಟ್ಟಣದ ಅನೇಕ ಗಣ್ಯಮಾನ್ಯರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ನೆರದಿದ್ದ ಸಹಸ್ರಾರು ಭಕ್ತರು ಸಮೂಹ ಬಾಳೇಹಣ್ಣು ಹಾಗೂ ದವನ ಪುಷ್ಪಗಳನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿ- ಭಾವನೆ ಸಮರ್ಪಿಸಿತು. ಮಹಾರಥೋತ್ಸವ ನೆರವೇರಿದ ನಂತರ, ದೇವಾಲಯದ ಅರಳಿಮರದ ಸಮೀಪ ಭಕ್ತಾಧಿಗಳಿಗೆ ಕುಡಿಯಲು ಪಾನಕ ಫಲಹಾರ ಮತ್ತು ನೀರು ಮಜ್ಜಿಗೆ ನೀಡಲಾಯಿತು.  ದೇವಾಲಯ ಸೇವಾ ಸಮಿತಿವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement