ಭಕ್ತಿಭಾವದಲ್ಲಿ ಮಿಂದೆದ್ದ ಜನಸಾಗರ
ಅರಸೀಕೆರೆ: ಜಾಜೂರು ಗ್ರಾಮದ ಗ್ರಾಮದೇವತೆಗಳಾದ ಹೊನ್ನಲ್ದಾಮ್ಮ ಹಾಗೂ ಚಿಕ್ಕಮ್ಮ ದೇವಿಯವರ ಮಹಾದಿವ್ಯರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದ ನಡುವೆ ವೈಭವದಿಂದ ಗುರುವಾರ ನೆರವೇರಿತು.
ರಥೋತ್ಸವದ ಅಂಗವಾಗಿ ಕಳೆದ ಸೋಮವಾರದಿಂದ ಭಕ್ತಾಧಿಗಳು ಆಗಮಿಸಿ ನಾನಾ ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ದೇವಿಯವರಿಗೆ ಭಕ್ತಿ ಸಮರ್ಪಿಸಿದರು.
ಗುರುವಾರ ಬೆಳಗ್ಗಿನಿಂದಲೇ ರಥೋತ್ಸವದ ಅಂಗವಾಗಿ ದೇವಿಯವರಿಗೆ ವಿಶೇಷ ಪೂಜೆ, ವಿಧಿವಿಧಾನಗಳು ನೆರವೇರಿದವು. ನಂತರ ದೇವಿಯನ್ನು ಬಣ್ಣ ಬಣ್ಣಬಣ್ಣದ ಬಟ್ಟೆಗಳಿಂದ ವಿವಿಧ ಭಗೆಯ ಹೂಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಿದ ನಂತರ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಯಲ್ಲಿ ನೆರೆದಿದ್ದ ಅಪಾರ ಭಕ್ತರು ರಥಕ್ಕೆ ಬಾಳೇಹಣ್ಣು, ದವನ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪಾನಕ ಫಲಹಾರ ವಿತರಿಸಿದರು.