'ಮುಂಗಾರು 1 ವಾರ ವಿಳಂಬ'
ಹಾಸನ: ರಾಜ್ಯದಲ್ಲಿ ಈ ಬಾರಿ ರಾಜ್ಯಕ್ಕೆ ಮುಂಗಾರು ಒಂದು ವಾರ ತಡವಾಗಿ ಆಗಮಿಸುತ್ತಿದ್ದು,ತ್ತು ಜೂನನ್ತಿಂಗಳಿನಲ್ಲಿ ವಾಡಿಕೆರಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕಡಾ. ಪ್ರಕಾಶ್ ತಿಳಿಸಿದ್ದಾರೆ.
ಹವಾಮಾನ ಪರಿಸ್ಥಿತಿಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಈ ಬಾರಿಯೂ ಜೂನನ್ತಿಂಗಳಿನಲ್ಲಿ ಅಷ್ಟೇನೂ ಉತ್ತಮ ಮುಂಗಾರು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಕಳೆಡೆರಡು ವರ್ಷಗಳಂತೆ ಈ ವರ್ಷವೂ ರಾಜ್ಯದಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಗಳಿದೆ. ಜೂನ್ನಲ್ಲಿ ಮಳೆ ಕೊರತೆ ಉಂಟಾಗಬಹುದು. ಜುಲೈ ಮತ್ತು ಆನಂತರದ ಹವಾಮಾನ ಮುನ್ಸೂಚನೆ ಮಳೆ ಸಾಧ್ಯತೆಗಳ ಬಗೆಗಿನ ವರದಿ ಇನ್ನೊಂಡೆರಡು ಮೂರು ದಿನಗಳಲ್ಲಿ ದೊರೆಯಲಿದ್ದು ಆನಂತರ ಒಟ್ಟಾರೆ ಮಳೆ ಪರಿಸ್ಥಿತಿಯನ್ನು ವಿಶ್ಲೇಷಿಸಬಹುದಾಗಿದೆ ಎಂದು ತಿಳಿಸಿದರು.