ಸಿಬಿಐ ತನಿಖೆಯಾಗಲಿ
ಕನ್ನಡಪ್ರಭ ವಾರ್ತೆ ಹಾಸನ ಏ. 25
ಶೃಂಗೇರಿಯ ತನಿಕೋಡು ಚೆಕ್ಪೋಸ್ಟ್ ಬಳಿ ನಡೆದ ನಕಲಿ ಎನ್ಕೌಂಟರ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಶುಕ್ರವಾರ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನೆ ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಏ. 19 ರಂದು ಶೃಂಗೇರಿಯ ತನಿಕೋಡು ಬಳಿ ಜಾನುವಾರು ಸಾಗಿಸುತ್ತಿದ್ದ ಯುವಕರ ಮೇಲೆ ನಕ್ಸಲ್ ನಿಗ್ರಹ ಪಡೆ ಗುಂಡು ಹಾರಿಸಿದ ಪರಿಣಾಮ ಕಬೀರ್ ಎಂಬ ಅಮಾಯಕ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
ಪ್ರಶ್ನೆ: ಯುವಕರ ಬಳಿ ಯಾವ ಆಯುಧಗಳು ಇಲ್ಲದಿದ್ದರೂ ಎ.ಎನ್ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸುವ ಅನಿವಾರ್ಯತೆ ಏನು ಇತ್ತು ಎಂದು ಪ್ರಶ್ನೆ ಮಾಡಿದರು.
ಮೃತಪಟ್ಟ ಕಬೀರ್ದೇಹಕ್ಕೆ ಬಿದ್ದಿರುವ ಗುಂಡನ್ನು ಗಮನಿಸಿದರೇ ಹತ್ತಿರ ನಿಲ್ಲಿಸಿಕೊಂಡು ಎದೆಗೆ ಒಡೆಯಲಾಗಿದೆ ಎಂದು ಆರೋಪಿಸಿದರು.
ಆತನ ಸಂಬಂಧಿಕರು ಮೃತ ದೇಹ ಪಡೆಯಲು ಬಂದಾಗ ಬಜರಂಗದ ಗೂಂಡಾಗಳು ಏಕಾಏಕಿ ದಳಿ ಮಾಡಿ, ವಾಹನ ಜಖಂಗೊಳಿಸಿದ್ದಾರೆ. ಎನ್ಕೌಂಟರ್ನಲ್ಲಿ ಇವರ ಕೈವಾಡವೂ ಇದ್ದು, ಪೂರ್ವ ಯೋಜಿತ ಸಂಚಿನ ಘಟನೆ ಎನ್ನುವ ಅನುಮಾನ ಮತ್ತಷ್ಟು ಅನುಮಾನ ಬರುತ್ತದೆ ಎಂದರು.
ಮನವಿ: ಮೃತ ವ್ಯಕ್ತಿಯ ಕುಟುಂಬಕ್ಕೆ ರು. 30 ಲಕ್ಷ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯುವ ಮುಖಂಡ ಧರ್ಮೇಶ್, ಡಿವೈಎಫ್ಐ ಸಂಘಟನೆಯ ಅಧ್ಯಕ್ಷ ವಾಸುದೇವ್ ಕಲ್ಕರೆ, ಕಾರ್ಯದರ್ಶಿ ಎಮ್.ಜಿ. ಪೃಥ್ವಿ, ಅರವಿಂದ್ ಇತರರು ಇದ್ದರು.