ಹಾಸನದಲ್ಲಿ ಮಳೆ
ಹಾಸನ: ನಗರವು ಸೇರಿದಂತೆ ತಾಲೂಕಿನ ಸುತಮುತ್ತ ಶುಕ್ರವಾರ ಮಧ್ಯಾಹ್ನ ಭಾರೀ ಮಳೆ ಸುರಿಯಿತು. ಮಳೆಯೊಂದಿಗೆ ಗಾಳಿ ಹಾಗೂ ಗುಡುಗು ಮಿಂಚಿನ ಆರ್ಭಟ ಹೆಚ್ಚಾಗಿತ್ತು.
ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರಿಗೆ ಈ ಮಳೆ ತಂಪನ್ನೆರೆಯಿತು. ಜೋರಾಗಿ ಬೀಸಿದ ಗಾಳಿಗೆ ಅಲ್ಲಲ್ಲಿ ಕೆಲ ಮರಗಳು ಧರೆಗುರುಳಿದರೆ, ತಗ್ಗು ಪ್ರದರ್ಶಗಳ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿತ್ತು.
ನಗರದ ಗೌರಿಕೊಪ್ಪಲಿನ ಸಮುದಾಯ ಭವನ ರಸ್ತೆಯ ಬಳಿ ಚರಂಡಿಗಳಲ್ಲಿ ನೀರು ಭರ್ತಿಯಾಗಿ ರಸ್ತೆಯ ಮೇಲೆ ಹರಿಯುತ್ತಿತ್ತು. ಇದರಿಂದ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಅಲ್ಲದೆ ಸೆಸ್ಕ್‌ನವರು ವಿದ್ಯುತ್ ಕಡಿತಗೊಳಿಸಿದ್ದರಿಂದ ಜನರು ಕೆಲ ಕಾಲ ಪರದಾಡಬೇಕಾಯಿತು.