ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಯುಕ್ತರ ವಿರುದ್ಧ ನಗರಸಭೆ ಅಧ್ಯಕ್ಷೆ ಧರಣಿ

Mainashree
Updated On : 27 Apr 2014, 12:06 pm

ಹಾಸನ: ನಗರಸಭೆ ಈಗ ಅಕ್ಷರಶಃ ವಿವಾದಗಳ ಗೂಡಾಗಿ ಪರಿವರ್ತನೆ ಗೊಂಡಿದೆ. ವಿವಾದದ ಕೇಂದ್ರ ಬಿಂದು ನಗರಸಭೆ ಆಯುಕ್ತ ವಿ.ಎಚ್. ಕೃಷ್ಣಮೂರ್ತಿ. ಲೋಕಸಭೆ ಚುನಾವಣೆ ವೇಳೆ ಒಂದು ಪಕ್ಷದ ಪರ ಪ್ರಚಾರ ಮಾಡುತ್ತಿದ್ದರು ಎಂಬ ದೂರಿನ ಮೇರೆ ಕಡ್ಡಾಯ ರಜೆ ಮೇಲೆ ಹೋಗಿದ್ದ ಕೃಷ್ಣಮೂರ್ತಿ ಬಂದ ನಂತರ ಅವರ ಪರ ಮತ್ತು ವಿರೋಧ ಪ್ರತಿಭಟನೆಗಳು, ಟೀಕೆ, ಟಿಪ್ಪಣೆ ನಡೆಯುತ್ತಿವೆ.
ಶುಕ್ರವಾರ ಕೆಲ ದಲಿತ ಸಂಘಟನೆಗಳು, ಆಯುಕ್ತ ಕೃಷ್ಣಮೂರ್ತಿ  ಅವರಿಗೆ ಕೆಲ ನಗರಸಭೆ ಸದಸ್ಯರು ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದವು. ಶುಕ್ರವಾರ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಆಯುಕ್ತರು ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಡದೆ ಜನಪ್ರತಿನಿಧಿಗಳನ್ನು ಅವಮಾನಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅನ್ಯಾಯ ಎಸಗಿದ್ದಾರೆ. ನಾನು ದಲಿತ ಮಹಿಳೆ. ಅಭಿವೃದ್ಧಿ ಕೆಲಸ ಮಾಡಲು ಆಯುಕ್ತರು ಅಡ್ಡಿಪಡಿಸುವುದಲ್ಲದೆ, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿ ಡಿಸಿ ಕಚೇರಿ ಬಳಿ ಧರಣಿ ನಡೆಸಿದರು.
ಗಂಡನ ಮರಣ ನಂತರ ಪತ್ನಿ ಸುಂದರಮ್ಮ ದ್ವಿತೀಯ ದರ್ಜೆ ಗುಮಾಸ್ತೆಯಾಗಿ ಅರಸೀಕೆರೆಯಿಂದ ಹಾಸನಕ್ಕೆ ಪ್ರತಿನಿತ್ಯ ಬಸ್ಸಿನಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ನಗರಸಭೆ ಕಚೇರಿಗೆ ಹೋಗಬೇಕಾದರೇ ಈಗಿರುವ ಕಮಿಷನರ್ ಕೃಷ್ಣಮೂರ್ತಿ ಮನೆ ಮುಂದೆ ಹೋಗಬೇಕು.
ಬಾಗಿಲ ಬಳಿ ನಿಂತಿದ್ದ ಅವರು ಮನೆ ಒಳಗೆ ಕರೆದು ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಆಯುಕ್ತರ ಕಚೇರಿಗೆ ಸಹಿ ಮಾಡಿಸಲು ಹೋದ ವೇಳೆ ತಮಗೆ ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ, ಕೆಲಸದಿಂದ ತೆಗೆದು ಹಾಕುವ ಮಾನಸಿಕವಾಗಿ ನೊಂದಿರುವ ಸುಂದರಮ್ಮ ಆಯುಕ್ತರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಅರಸೀಕೆರೆ ಪುರಸಭೆಗೆ ವರ್ಗಾಯಿಸಬೇಕು ಇಲ್ಲವಾದರೆ, ಆಯುಕ್ತ ಕೃಷ್ಣಮೂರ್ತಿ ಅವರನ್ನು ವರ್ಗಾಯಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement