ಕಣಕಟ್ಟೆ ಕರಿಯಮ್ಮ ಅಂಬಾರಿ ರಥೋತ್ಸವ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದೇವತೆ ಕರಿಯಮ್ಮಗೆ ಇದೇ ಪ್ರಥಮ ಬಾರಿಗೆ ಆನೆ ಅಂಬಾರಿ ಮೇಲೆ ಮೂಲಸ್ಥಾನದಿಂದ ಮೂರುಕಣ್ಣು ಮಾರಮ್ಮ ನೇತೃತ್ವದಲ್ಲಿ ಕಣಕಟ್ಟೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ರಥೋತ್ಸವ ನೆರವೇರಿತು.
ಆನೆ ಅಂಬಾರಿ ಉತ್ಸವ ನೋಡಲು ಸುತ್ತ-ಮುತ್ತಲಿನ ಸಹಸ್ರಾರು ಜನರು ಆಗಮಿಸಿ ಭಕ್ತಿ ಸಮರ್ಪಿಸಿದರು. ಅಂಬಾರಿ ಉತ್ಸವ ಮುಗಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರು ರಾಜ್ಯದ ನಾನಾ ಭಾಗಗಳಿಂದ ಭಾಗವಹಿಸಿ ಕಳೆದ 4 ದಿನಗಳ ಕಾಲ ನಡೆದ ವಿವಿಧ ಉತ್ಸವಗಳಲ್ಲಿ ಭಾಗವಹಿಸಿ ಹರಕೆ ಪಾನಕ ಗಾಡಿಯೊಂದಿಗೆ ವಸಂತ ಸೇವೆ ನಡೆಸಿ ಭಕ್ತಿ ನಮನ ಸಲ್ಲಿಸಿದರು.
ದೋಣಿನ ಚೌಡಮ್ಮ ಮತ್ತಿತರೆ ದೇವತೆಗಳನ್ನು ಹೊತ್ತು ಕುಣಿತ ಮತ್ತು ಕರಡೆವಾದ್ಯ, ಚಿಟ್ಟೆಮೇಳೆ, ತಮಟೆ ವಾದ್ಯಗಳು ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಿದವು.