ಗುಂಪು ಘರ್ಷಣೆ: ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರ ಮೇಲೆ ಹಲ್ಲೆ
ಸಕಲೇಶಪುರ: ರಸ್ತೆಯಲ್ಲಿ ಧೂಳೆಬ್ಬಿಸುತ್ತ ಹಗಲು ರಾತ್ರಿ ಟ್ರ್ಯಾಕ್ಟರ್ ಮೂಲಕ ಗದ್ದೆಗೆ ಮಣ್ಣು ಸಾಗಿಸುತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ, ದಾಂಧಲೆ ತಡೆಯಲು ಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಅಲ್ಲದೆ ದುಷ್ಕರ್ಮಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಂಜೀವಶೆಟ್ಟಿ ಹಾಗೂ ಸ್ಥಳಿಯರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಲು ಸಂಜೀವ ಶಟ್ಟಿಯವರನ್ನು ಸಂಧಾನಕ್ಕೆ ಕರೆದು ಎಕಾ ಏಕಿ ಹಲ್ಲೆ ನಡೆಸಿ ಚಿನ್ನದ ಚೈನ್ ದೋಚಲಾಗಿದೆ. ಹಲ್ಲೆ ತಡೆಯಲು ಯತ್ನಿಸಿದ ದಾರಿಹೊಕ ಕುಮಾರ್ (40)ಮತ್ತು ಅಶ್ವಿನ್(26) ಮೇಲೂ ಸುಮಾರು 50 ಜನರ ತಂಡ ಹಲ್ಲೆ ನಡೆಸಿದೆ. ಕುಮಾರ್ ಎಡಗೈ, ಎದೆ, ಭುಜಕ್ಕೆ ಪೆಟ್ಟು ಬಿದ್ದಿದ್ದು, ಅವರಿಂದ ರು.25 ಸಾವಿರ ನಗದು ಅಪಹರಿಸಲಾಗಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಸಂಜೀವ್ಶೆಟ್ಟಿ ಪೋಲಿಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನಲೆ: ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ದಲ್ಲಿರುವ ಗದ್ದೆಗಳಿಗೆ ಆನೆಮಹಲ್ ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ಮಣ್ಣು ಹಾಕಲಾಗುತ್ತಿದೆ. ಹಗಲು ರಾತ್ರಿ ಮಣ್ಣು ಸಾಗಿಸುತ್ತಿರುವುದರಿಂದ ಧೂಳು ಮತ್ತು ರಾತ್ರಿ ವೇಳೆ ಶಬ್ಧ ಮಾಲಿನ್ಯದಿಂದ ಬೇಸತ್ತ ಸ್ಥಳಿಯ ನಿವಾಸಿಗಳು ಮಣ್ಣು ಸಾಗಾಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆರಳಿದ ಮಣ್ಣು ಸಾಗಾಟಗಾರರ ತಂಡ ಸಂಜೀವ ಶೆಟ್ಟಿಯವರ ಮೇಲೆ ಶುಕ್ರವಾರ ಹಲ್ಲೆಗೆ ಮುಂದಾಗಿದೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಎರಡು ಕಡೆಯವರೂ ದೂರು ನೀಡಿದ್ದರು. ಈ ಬಗ್ಗೆ ಸಂಧಾನ ಸಂದರ್ಭದಲ್ಲಿ ಒಂದು ಗುಂಪು ಹಲ್ಲೆ ನಡೆಸಿದೆ ಎಂದು ಆರೋಪ ಮಾಡಲಾಗಿದೆ.