ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಗತಿಗೆ ವೈಚಾರಿಕೆ ಪ್ರಜ್ಞೆ ಅಗತ್ಯ

Mainashree
Updated On : 27 Apr 2014, 12:05 pm

ಹಾಸನ: ಗುಡಿ, ಚರ್ಚು, ಮಸೀದಿಗಳಿಂದ ಹೊರಬಂದು ಮಾನವನ ಬದುಕಿನ ಬಡತನ ದೂರ ಮಾಡಲು, ವಿಜ್ಞಾನ ದೀವಿಗೆ ಹಿಡಿಯಿರಿ, ಅದರಿಂದ ವೈಚಾರಿಕ ಪ್ರಜ್ಞೆ ಮೂಡಿಸಿ ಎಂದು ಸಾಹಿತಿ ಜ.ಹೊ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಇತ್ತೀಚೆಗೆ  ನಡೆದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ವೈಚಾರಿಕ ಪ್ರಜ್ಞೆ ಎನ್ನುವುದು ವಿಚಾರವನ್ನು ವಿವೇಚನೆಯಿಂದ ಅಭ್ಯಸಿಸುವುದು, ಅಂತರಂಗದಿಂದ ಶುದ್ಧೀಕರಿಸಿಕೊಂಡು ಪ್ರಯೋಗಾತ್ಮಕವಾಗಿ ಪರಿಶೀಲಿಸಿ ಸಮಾಜಕ್ಕೆ ಒಳಿತಾಗುವ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸುವಂತೆ ಮಾಡುವುದು ಎಂದು ಅಭಿಪ್ರಾಯಪಟ್ಟರು.
ಭಾರತ ಜ್ಞಾನ-ವಿಜ್ಞಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಚ್.ಎ.ಅಹಮ್ಮದ್ ಮಾತನಾಡಿ, ವೈಚಾರಿಕ ಪ್ರಜ್ಞೆ ಎನ್ನುವುದು ಮಾನವ ಸಮಾಜವನ್ನು ಧಾರ್ಮಿಕ ಹಿನ್ನಲೆಯಲ್ಲಿ ಕಂದಾಚಾರಗಳ ನಡುವೆ ಸಿಲುಕಿಸಿ ಕೆಲವೇ ವರ್ಗದ ಉನ್ನತ ಸ್ಥರದ ಜನ ಮತ್ತು ಆಳರಸರು ಸೃಷ್ಟಿಸಿದ ಭ್ರಮಾತ್ಮಕ ಮೌಢ್ಯದ ಪ್ರಾಯೋಗಿಕ ಚಿಂತನೆಗಳಿಗೆ ಪರ್ಯಾಯ ಸಮಾಜಮುಖಿ ಹಾಗೂ ನೈಸರ್ಗಿಕ ತತ್ವದ ಅನುಸಾರ ವಿವೇಚಿಸುವ, ವೈಜ್ಞಾನಿಕವಾಗಿ ಪರಿಶೀಲಿಸುವ ಹಾಗೂ ಜಾತ್ಯಾತೀತವಾಗಿ ವಿವೇಚಿಸುವ ಆಲೋಚನೆಯೇ ಆಗಿದೆ ಎಂದರು.
ಮಾದರಿ ಪ್ರಜ್ಞೆಯನ್ನು ತಾರ್ಕಿಕವಾಗಿ ನಿರೂಪಿಸಿದವನು ಸಾಕ್ರಟಿಸ್, ನಂತರ ಪ್ಲೇಟೋ, ಅರಿಸ್ಟಾಟಲ್, ಚಾರ್ವಾಕ, ಬುದ್ಧ ಮಧ್ಯಯುಗದಲ್ಲಿ ಬಸವಣ್ಣ, ನಂತರದ ವೈಜ್ಞಾನಿಕ ಸಂಶೋಧನೆಗಳು ವೈಚಾರಿಕ ಪ್ರಜ್ಞೆ  ಮಾನವ ಸಮಾಜದ ಅಭ್ಯುದಯದ ಚಿಂತನೆಗಳಾಗಿವೆ ಮಾನವ ಕಲ್ಯಾಣ ಯಾವ ಚಿಂತನೆಯಿಂದ ಉತ್ತಮಗೊಳ್ಳುತ್ತದೋ ಅದುವೇ ವೈವಾರಿಕತೆ ಎಂದರು.
ಉಪನ್ಯಾಸಕಿಯರಾದ ರತ್ನವತಿ ಮತ್ತು ನಿರ್ಮಲಾ ಮಾತನಾಡಿ, ವಿಜ್ಞಾನದ ಆವಿಷ್ಕಾರಗಳು ವೈಚಾರಿಕ ಚಿಂತನೆ ಫಲವೇ ಹೊರತು, ತಪಸ್ಸುಗಳ ಫಲ ಅಲ್ಲ, ವಿಜ್ಞಾನ ತನ್ನ ವೈಚಾರಿಕ ಚಿಂತನೆಯ ಫಲವಾಗೆ ತಾನೇ ಸೃಷ್ಟಿಸಿದ ಸಂಶೋಧನೆಗಳ ಫಲಗಳನ್ನು ಸರಿಪಡಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಡಾ.ಜಯಂದ್ರಗುಪ್ತ, ರೈತಪರ ಹೋರಾಟಗಾರ ನವೀನ್‌ಕುಮಾರ್, ಉಪನ್ಯಾಸಕ ಗೊರೂರು ಶಿವೇಶ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.
ಅಧ್ಯಯನ ವೃತ್ತದ ಸಂಚಾಲಕ ಕಿಶೋರ್ ಸ್ವಾಗತಿಸಿದರು.  ಸುರೇಶ್‌ಗುರೂಜಿ, ವಕೀಲ ಯೋಗೇಶ್, ಸತ್ಯನಾರಾಯಣ, ಜಯದೇವಪ್ಪ, ಮಂಜುನಾಥ ಡಿವೈಎಫ್‌ಐ ಮುಖಂಡರಾದ ವಾಸುದೇವ್, ಪೃಥ್ವಿ, ರಾಘವೇಂದ್ರ ಉಪಸ್ಥಿತರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement